ಕೆ.ಎಫ್.ಡಿ.ಸಿ. ಕಾರ್ಮಿಕರಿಗೆ ಸಿಗದ ಹೆಚ್ಚುವರಿ ಬೋನಸ್

0

ಮಾಜಿ ಸಚಿವ ರಮಾನಾಥ ರೈಯವರಿಗೆ ಕಾರ್ಮಿಕ ಮುಖಂಡರ ಮನವಿ

ಸ್ಪಂದಿಸಿದ ರೈ – ಎಂ‌.ಡಿ.ಯವರೊಂದಿಗೆ ಮಾತುಕತೆ

    ಕೆ.ಎಫ್.ಡಿ.ಸಿ. ಕಾರ್ಮಿಕರಿಗೆ 2022 ಮತ್ತು 2023 ರ ಬೋನಸನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನೀಡಬೇಕಾಗಿತ್ತು. ಶೇಕಡಾ  20 ಬೋನಸ್ ನೀಡುವುದಾಗಿ   ಮಂಗಳೂರಿಗೆ ಬಂದಿದ್ದಾಗ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು.  

ಆದರೆ 2022 ರಲ್ಲಿ ನಿಗಮವು ಬೋನಸ್ ನೀಡಿರಲಿಲ್ಲ. 2023 ರಲ್ಲಿ ಕಾರ್ಮಿಕರ ಬೇಡಿಕೆಯಂತೆ ಎರಡು ವರ್ಷದ ಬೋನಸ್ ನೀಡದೆ ಒಂದು ವರ್ಷದ ಬೋನಸ್ ಶೇಕಡಾ 8.33 ಮಾತ್ರ ಸರಕಾರ ನೀಡಿತ್ತು. ಶೇ. 20 ರಲ್ಲಿ 8.33 ಶೇ. ಹೊರತು ಉಳಿಕೆ ಬೋನಸ್ ಹಣವನ್ನು ಕಾರ್ಮಿಕರಿಗೆ ಬಿಡುಗಡೆ ಮಾಡಬೇಕೆಂದು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರನ್ನು ರಬ್ಬರ್ ಕಾರ್ಮಿಕರ ನಾಲ್ಕು ಸಂಘಟನೆಗಳ ಪದಾಧಿಕಾರಿಗಳು ಕಂಡು ಮನವಿ ಮಾಡಿದರು. ದ. 4 ರಂದು ಪುತ್ತೂರಿನ ನಿರೀಕ್ಷಣ ಮಂದಿರದಲ್ಲಿ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ರಮಾನಾಥ ರೈ ಯವರನ್ನು ಭೇಟಿಯಾಗಿ ಕಾರ್ಮಿಕರ ಬೋನಸ್ ಸಮಸ್ಯೆಗಳನ್ನು ಅವರಿಗೆ ಮನವರಿಕೆ ಮಾಡಿ ನಮ್ಮ ಬೇಡಿಕೆಯನ್ನು ಇತ್ಯರ್ಥ ಮಾಡಿಕೊಡುವಂತೆ ಮುಖಂಡರು ವಿನಂತಿಸಿದರು.

ಮನವಿಗೆ ಕೂಡಲೇ ಸ್ಪಂದಿಸಿದ ರಮಾನಾಥ ರೈಯವರು, ಅರಣ್ಯ ಸಚಿವರಾದ ಈಶ್ವರ ಖಂಡ್ರೆಯವರನ್ನು ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ದೂರವಾಣಿ ಮುಖೇನ ಸಂಪರ್ಕಿಸಿ ಕಾರ್ಮಿಕರಿಗೆ ಕೊಡಬೇಕಾದ ಉಳಿಕೆ ಬೋನಸ್ ನ್ನು ಆದಷ್ಟು ಬೇಗ ಕೊಡುವಂತೆ ಕೇಳಿಕೊಂಡರು. ಅದರಂತೆ MD ಯವರು ಒಪ್ಪಿಗೆ ಸೂಚಿಸಿ, ಅರಣ್ಯ ಸಚಿವರನ್ನು ಭೇಟಿಯಾಗಿ ಉಳಿಕೆ ಬೋನಸ್ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಒಪ್ಪಿಕೊಂಡರು.

ಈ ಭೇಟಿಯ ವೇಳೆ ಕರ್ನಾಟಕ ಪ್ಲಾಂಟೇಶನ್ & ಇಂಡಸ್ಟ್ರಿಯಲ್ ವರ್ಕರ್ಸ್ ಟ್ರೇಡ್ ಯೂನಿಯನಿನ ಅದ್ಯ ಕ್ಷರಾದ ಶಿವಕುಮಾರ್ ಕೌಡಿಚಾರ್, ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮಾಜಿ ಜಿಲ್ಲಾಧ್ಯಕ್ಷ ಸಚಿನ್ ರಾಜ್ ಶೆಟ್ಟಿದ.ಕ ಇಂಡಸ್ಟ್ರಿಯಲ್ & ವರ್ಕರ್ಸ್ ಯುನಿಯನಿನ ಪ್ರಧಾನ ಕಾರ್ಯದರ್ಶಿ ರಾಮಸ್ವಾಮಿ* (ಆನಂದ), ಜನರಲ್ ಎಂಪ್ಲಾಯಿಸ್ ಯುನಿಯನಿನ ಅಧ್ಯಕ್ಷರಾದ ಶ್ರೀ ಜೀವರತ್ನಮ್ ಮತ್ತು ಶ್ರೀ ಕುರೂಶ್, ತೋಟತೊಳಿಲಾರ್ ಸಂಘದ ಪ್ರಧಾನ ಕಾರ್ಯದರ್ಶಿ * ರಾಜಕೃಷ್ಣ , ಸೆಲ್ವರತ್ನಮ್* (ರಾಜ) ತೊಡಿಕಾನ ಕಾಂಗ್ರೆಸ್ ಪಕ್ಷದ ಐತ್ತೂರು ಗ್ರಾಮ ಸಮಿತಿ ಅದ್ಯಕ್ಷರಾದ ಸುಬ್ರಹ್ಮಣ್ಯ, ಶ್ರೀ ಹನುಮಂತನ್ 72 ನೇ ಕೊಲನಿ ,ತಮಿಳ್ ಶೇಕರ್ ಪೆರಲಂಪಾಡಿ, ಗಣೇಶ್ ಪೆರಲಂಪಾಡಿ, ಸತೀಂದ್ರ ಕೌಡಿಚಾರು ಮೊದಲಾದವರು ಉಪಸ್ಥಿತರಿದ್ದರು.
,