ಓಡಬಾಯಿ ಅಭಿವೃದ್ಧಿಗೆ ಪೂರಕವಾಗಿ ತಲೆಯೆತ್ತಿದ ಕಲಾ ಮಂದಿರಕ್ಕೆ ದಶ ಸಂಭ್ರಮ

0

ಸುಳ್ಯ ನಗರ ಅಭಿವೃದ್ಧಿ ಹೊಂದಿದ ರೀತಿಯಲ್ಲಿ ಸುಳ್ಯ ಓಡಬಾಯಿ ಅಭಿವೃದ್ಧಿಹೊಂದಿದೆ ಸುಳ್ಯದ ರಾಷ್ಟ್ರೀಯ ಹೆದ್ದಾಾರಿಗೆ ತಾಗಿಕೊಂಡಿರುವ ಆಕರ್ಷಕ ಕಲಾ ಮಂದಿರ ಕುಂಭಕೋಡು ಅಚ್ಯುತ ಭಟ್ ಶಶಿಕಲಾ ಮಂದಿರ
ಸುಳ್ಯ ನಗರದ ಆಕರ್ಷಣೆಯಲ್ಲಿ ಸಭಾಭವನ, ಕಲಾಮಂದಿರಗಳ ಪಾಲು ಮಹತ್ವದಿದೆ. ಹತ್ತಾಾರು ಕಲಾಮಂದಿರಗಳು,ಸಭಾಭವನಗಳು,ಹಾಲ್‌ಗಳು ಸುಳ್ಯದಲ್ಲಿ ಜನರಿಗೆ ದೊರೆಯುತ್ತವೆ.

ಅದರಲ್ಲಿ ವಿಶೇಷ ಆಕರ್ಷಣೆಯಾಗಿ ಕಂಗೊಳಿಸುವ ಸಭಾಭವನ ಕುಂಭಕೋಡು ಕಸ್ತೂರಿ ಅಚ್ಯುತ ಭಟ್ ಶಶಿಕಲಾ ಮಂದಿರ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾಾರಿಗೆ ತಾಗಿಕೊಂಡಿರುವ ಈ ಸಭಾಭವನ ಕಳೆದ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಈ ಸಭಾಭವನ ದಶ ಸಂಭ್ರಮದಲ್ಲಿದೆ.


ಹತ್ತು ವರ್ಷಗಳ ಹಿಂದೆ ದಿ.ಕುಂಭಕ್ಕೊಡು ಶುಭಕರ ರಾವ್ ಅವರ ಕನಸಿನ ಯೋಜನೆಗಳಲ್ಲಿ ಒಂದಾಗಿದೆ ಸುಸಜ್ಜಿತ ಸಭಾಭವನ ನಿರ್ಮಾಣ ಅದನ್ನು ಬಹಳ ಸುಂದರ ರೀತಿಯಲ್ಲಿ ನಿರ್ಮಿಸಿಕೊಟ್ಟು ಸಾರ್ವಜನಿಕರಿಗೆ ಉಪಯೋಗಕ್ಕೆ ಅನುವುಮಾಡಿಕೊಟ್ಟಿದ್ದಾರೆ.

ಸುಳ್ಯ ನಗರದ ಮುಖ್ಯರಸ್ತೆಯಲ್ಲಿ ಏಕೈಕ ಹವಾನಿಯಂತ್ರಿತ ಹಾಲ್ ಎಂಬ ಹೆಮ್ಮೆಗೂ ಪಾತ್ರವಾಗಿದೆ. ವಿಶಾಲವಾದ ಹಾಲ್,ಉತ್ತಮ ಪಾರ್ಕಿಂಗ್ ವ್ಯವಸ್ಥೆಯನ್ನು ಒಳಗೊಂಡ ಸಭಾಭವನ
ಕುಂಭಕೋಡು ಶುಭಕರ ರಾವ್ ರವರು ಸುಳ್ಯದ ನಾಡಿಮಿಡಿತವನ್ನು ಅರಿತು ಆರಂಭಿಸಿದ ಈ ಸುಂದರವಾದ ಸಭಾಭವನವನ್ನು ಈಗ ಅವರ ಪತ್ನಿ ಶ್ರೀಮತಿ ಶಶಿಕಲಾ ಶುಭಕರ ರಾವ್ ಮುನ್ನಡೆಸುತ್ತಿದ್ದಾರೆ.


ನನ್ನ ಪತಿಯವರಾದ ದಿ.ಕುಂಭಕ್ಕೊಡು ಶುಭಕರ ರಾವ್ ರವರ ಕನಸಿನ ಯೋಜನೆಯಾದ ಸುಂದರ ಸಭಾಭವನ ಅದಕ್ಕೆ ಈಗ ಹತ್ತನೆ ಹುಟ್ಟುಹಬ್ಬದ ಸಂಭ್ರಮ.


ನಾವು ಸಾರ್ವಜನಿಕರಿಗೆ ಸಕಲ ಸೌಲಭ್ಯಗಳನ್ನೊಳಗೊಂಡ ಸಭಾಭವನವನ್ನು ಅತೀ ರಿಯಾಯಿತಿ ಮತ್ತು ವಿನಾಯಿತಿಯಲ್ಲಿ ಸಾರ್ವಜನಿಕಕರಿಗೆ ಬಾಡಿಗೆಗೆ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೂ ಕೊಡುವಂತಹ ಯೋಜನೆಯನ್ನು ಹಾಕಿಕೊಂಡಿದ್ದೇವೆ ಈ ಹಿಂದೆ ನಮಗೆ ಸಹಕಾರ ನೀಡಿದವರಿಗೆ ಕೃತಜ್ಞತೆಗಳೊಂದಿಗೆ ಮುಂದೆಯೂ ಸಹಕಾರ ಕೇಳುತ್ತೆವೆ.
ಶ್ರೀಮತಿ ಶಶಿಕಲಾ ಶುಭಕರ ರಾವ್
ಮಾಲಕಿ ಕುಂಭಕ್ಕೊಡು ಸಭಾಭವನ