ಶಿವಳ್ಳಿ ಸಂಪನ್ನದಿಂದ ದೀಪಾವಳಿ ಸಂಭ್ರಮಾಚರಣೆ

0


ಸುಳ್ಯ ತಾಲೂಕು ಶಿವಳ್ಳಿ ಸಂಪನ್ನದ ವತಿಯಿಂದ ಸಾಮೂಹಿಕ ದೀಪಾವಳಿ ಆಚರಣೆ ಶ್ರೀಗುರುರಾಘವೇಂದ್ರ ಮಠದಲ್ಲಿ ಡಿ.೮ ರಂದು ನಡೆಯಿತು.
ಸಭಾಧ್ಯಕ್ಷತೆಯನ್ನು ಸಂಪನ್ನದ ಅಧ್ಯಕ್ಷ ರಾಮ್‌ಕುಮಾರ್ ಹೆಬ್ಬಾರ್ ವಹಿಸಿದ್ದರು. ಸಂಚಾಲಕ ಪ್ರಕಾಶ್ ಮೂಡಿತ್ತಾಯ ಅವರು ದೀಪಾವಳಿ ಆಚರಣೆ ಬಗ್ಗೆ ತಿಳಿಸಿದರು.
ರಾಯರ ಮಠದ ಅಧ್ಯಕ್ಷ ಎಂ.ಎನ್. ಶ್ರೀಕೃಷ್ಣ ಸೋಮಯಾಗಿ,ಸಂಪನ್ನದ ಕಾರ್ಯದರ್ಶಿ ನವೀನ್ ಸೋಮಯಾಗಿ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಾ ನಾವಡ, ಮುಖ್ಯ ಅತಿಥಿಯಾಗಿ ಕಿಶೋರ್ ಪಡ್ಡಿಲಾಯ, ಸುಬ್ರಹ್ಮಣ್ಯ ಮೂಡಿತ್ತಾಯ ಉಪಸ್ಥಿತರಿದ್ದರು.
ವಿವಿಧ ಆಟೋಟಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಮೋಜಿನ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಪಟಾಕಿ ಸಿಡಿಸಿ ದೀಪಾವಳಿ ಹಬ್ಬಕ್ಕೆ ಮೆರುಗು ನೀಡಲಾಯಿತು.
ಶರಣ್ಯ, ಅನೂಷಾ, ಪ್ರಣಮ್ಯ, ಆದಿತ್ಯ ಹೆಬ್ಬಾರ್, ಐಶಾನಿ, ಇಂಚರಾ, ಮಾಧುರ್‍ಯ ಕಾರ್ಯಕ್ರಮದಲ್ಲಿ ಸಹಕರಿಸಿದರು.