ಕೊಡಿಯಾಲದ ಪೊಟ್ರೆಗೆ ಸರಕಾರಿ ಬಸ್ಸು ಸೇವೆ ಸ್ಥಗಿತ – ಸಾರ್ವಜನಿಕರಿಗೆ ತೊಂದರೆ

0

ಕೊಡಿಯಾಲ ಗ್ರಾಮದ ಪೊಟ್ರೆ ಎಂಬಲ್ಲಿಗೆ ಸರಕಾರಿ ಬಸ್ಸು ಬರುವುದು ಸ್ಥಗಿತಗೊಂಡಿದ್ದು ಸಾರ್ವಜನಿಕರಿಗೆ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ಕೊಡಿಯಾಲದ ಕಲ್ಲಪಣೆಗೆ ಬರುತ್ತಿದ್ದ ಸರಕಾರಿ ಬಸ್ಸು ಅಲ್ಲಿಂದ ಪೊಟ್ರೆವರೆಗೆ ಬೆಳಿಗ್ಗೆ ಗಂಟೆ 8.30 ಕ್ಕೆ ಬರುತ್ತಿತ್ತು ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ,ಸಾರ್ವಜನಿಕರಿಗೆ ಪ್ರಯೋಜನವಾಗಿತ್ತು.
ಈಗ ಎರಡು ತಿಂಗಳುಗಳಿಂದ ಬಸ್ಸು ಸಂಚಾರ ಸ್ಥಗಿತಗೊಂಡಿದ್ದು ಬೆಳಿಗ್ಗೆ ಸಂಜೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.
ಗ್ರಾಮೀಣ ಪ್ರದೇಶವಾದ ಕೊಡಿಯಾಲದಲ್ಲಿ ವಾಹನಗಳ ಸಂಖ್ಯೆ ಕಡಿಮೆ ಇರುವುದರಿಂದ ಬಸ್ಸನ್ನೇ ನಂಬಿಸುವ ವಿದ್ಯಾರ್ಥಿಗಳಿಗೆ , ನಾಗರಿಕರಿಗೆ ಸಮಸ್ಯೆ ಎದುರಾಗಿದೆ.ಈ ಬಗ್ಗೆ ಸಂಬಂದಪಟ್ಟವರಿಗೆ ಮನವಿ ನೀಡಲಾಗಿದ್ದು ಆದಷ್ಟು ಬೇಗ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ