ಸುಳ್ಯ ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ ಮಂತ್ರಿ ಮಂಡಲ ರಚನೆ

0

ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿ.ಪ್ರಾ.ಶಾಲೆ ಸುಳ್ಯ ಇಲ್ಲಿ 2024-25ನೇ ಸಾಲಿನ ನೂತನ ಮಂತ್ರಿ ಮಂಡಲವನ್ನು ಇತ್ತೀಚೆಗೆ ರಚನೆ ಮಾಡಲಾಯಿತು.

ಜೂ. 4 ರಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 5,6,7ನೇ ತರಗತಿಯ ವಿದ್ಯಾರ್ಥಿಗಳು ಮತಗಳನ್ನು ಹಾಕುವುದರ ಮೂಲಕ ಶಾಲಾ ನಾಯಕ ಹಾಗೂ ಉಪನಾಯಕಿಯನ್ನು ಆಯ್ಕೆ ಮಾಡಲಾಯಿತು. ಅತೀ ಹೆಚ್ಚು ಮತಗಳನ್ನು ಗಳಿಸುವುದರ ಮೂಲಕ ಶಾಲಾ ನಾಯಕನಾಗಿ 7ನೇ ತರಗತಿಯ ಕಾರ್ತಿಕ್ ನಾಯಕ್ ಮತ್ತು ಉಪನಾಯಕಿಯಾಗಿ 7ನೇ ತರಗತಿಯ ತನ್ವಿ ಎನ್.ಬಿ ರವರನ್ನು ಆಯ್ಕೆ ಮಾಡಲಾಯಿತು.

ಮುಖ್ಯ ಶಿಕ್ಷಕ ಸಿಸ್ಟರ್ ಅಂತೋನಿ ಮೇರಿ ಹಾಗೂ 7ನೇ ತರಗತಿ ಶಿಕ್ಷಕಿಯಾಗಿರುವ ಶ್ರೀಮತಿ ವಲ್ಸ ಟೀಚರ್ ಮತ್ತು ದೈಹಿಕ ಶಿಕ್ಷಕ ಉಮೇಶ್ ಪಿ. ಮತ್ತು ಮಂತ್ರಿಮಂಡಲ ರಚನೆ ಜವಾಬ್ದಾರಿ ವಹಿಸಿಕೊಂಡಿರುವ ಶ್ರೀಮತಿ ಸ್ಮಿತಾರವರ ಸಹಕಾರದೊಂದಿಗೆ ಇತರ ಮಂತ್ರಿಗಳನ್ನು ನೇಮಿಸಲಾಯಿತು.

ಶಿಕ್ಷಣ ಮಂತ್ರಿಯಾಗಿ ರಶ್ಮಿ ಆರ್ ದೃತಿ ಯು.ಯಂ, ಶಿಸ್ತು ಮಂತ್ರಿಯಾಗಿ ಹವ್ಯಶ್ರೀ, ಗ್ಲೇನ್ ರಿಶೋನ್ ಡಿಸೋಜ,ಮಹಮ್ಮದ್ ಸಫ್ ವಾನ್,
ಆರೋಗ್ಯ ಮಂತ್ರಿಯಾಗಿ ಫಾತಿಮತ್ ಶಿಫಾನ, ಧೃತಿಶ್ರೀ, ಪ್ರಪುಲ್ಲಾ
ಶುಚಿತ್ವ ಮಂತ್ರಿಯಾಗಿ ಗಾಯತ್ರೀ, ಕೀರ್ತಿ, ಕ್ರೀಡಾ ಮಂತ್ರಿಯಾಗಿ ಆಯಿಷತ್ ಮುನ್ ಸ್ವೀರಾ, ಸಂತೋಷ ಆರ್
ಗೃಹ ಮಂತ್ರಿಯಾಗಿ -7ನೇ ತರಗತಿ ದೀಕ್ಷಿತ್ , 6ನೇ ತರಗತಿ ಮುಖ್ತಾರ್,
ಸಾಂಸ್ಕೃತಿಕ ಮಂತ್ರಿಯಾಗಿ ಶ್ರೇಯಾ ಡಿ.ಯಂ, ವಂಶಿತ್, ತೋಟಗಾರಿಕೆ ಮಂತ್ರಿಯಾಗಿ ಮುನಾಶಿಕ್ ,ರಿಫಾಝ್
ನೀರಾವರಿ ಮಂತ್ರಿಯಾಗಿ ಕುಶಾಲ್ ಕುಮಾರ್,ನ್ಯೂಮನ್
ಆಹಾರ ಮಂತ್ರಿಯಾಗಿ -ಆಯು ಷ್,ಕಿರಣ್,ಶಫ,ಅಸ್ನಿಫ ಹಾಗೂ ವಿರೋಧ ಪಕ್ಷದ ನಾಯಕಿಯಾಗಿ ಸುಧೀಕ್ಷಾ ಮತ್ತು ಸದಸ್ಯರಾಗಿ ಧನ್ಯ, ಅಮೃತ,ಅನುಷ್ಕ,ಕುಶಾಂತ್,ಸಹದ್ ರವರನ್ನು ಆಯ್ಕೆ ಮಾಡಲಾಯಿತು.

ಎಲ್ಲಾ ಮಂತ್ರಿ ಮಂಡಲದ ಸದಸ್ಯರಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವು ಜೂ 06 ರಂದು ನಡೆಸಿಕೊಡಲಾಯಿತು.

ಆಯ್ಕೆಯಾದ ಎಲ್ಲಾ ಮಂತ್ರಿಮಂಡಲದ ಸದಸ್ಯರಿಗೆ ಶಾಲಾ ಮುಖ್ಯ ಶಿಕ್ಷಕ ಸಿಸ್ಟರ್ ಅಂತೋನಿ ಮೇರಿಯವರು ಶುಭ ಹಾರೈಸಿದರು.


ಮಂತ್ರಿಮಂಡಲದ ಸದಸ್ಯರು ಪಾಲಿಸಬೇಕಾದ ಕರ್ತವ್ಯಗಳ ಬಗ್ಗೆ 6ನೇ ತರಗತಿ ಶಿಕ್ಷಕಿ ಸಿಸ್ಟರ್ ಗ್ರೇಸಿ ಡಿಸೋಜರವರು ತಿಳಿಸಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.