ದ.ಕ.ಜಿಲ್ಲಾ ಗೃಹರಕ್ಷಕದಳ ಸಮಾದೇಷ್ಠರಾದ ಡಾ.ಮುರಲೀ ಮೋಹನ್ ಚೂಂತಾರುರವರಿಗೆ ಡಿಜಿ ಡಿಸ್ಕ್ ಪುರಸ್ಕಾರ

0

ದ.ಕ.ಜಿಲ್ಲಾ ಗೃಹರಕ್ಷಕದಳ ಸಮಾದೇಷ್ಠರಾದ ಡಾ.ಮುರಲೀ ಮೋಹನ್ ಚೂಂತಾರುರವರಿಗೆ ಭಾರತ ಸರ್ಕಾರದ ಗೃಹ ಸಚಿವಾಲಯ ನವದೆಹಲಿ ಇವರು ನೀಡಲ್ಪಟ್ಟ ಡಿಜಿ ಡಿಸ್ಕ್ ಪುರಸ್ಕಾರವನ್ನು ಡಿ.8ರಂದು ಪೋಲಿಸ್ ಮಹಾನಿರ್ದೇಶಕರ ಕಚೇರಿ ಬೆಂಗಳೂರಿನಲ್ಲಿ ನಡೆದ ಗೃಹರಕ್ಷಕ ದಳದ 61ನೆ ಉತ್ತಾನ ದಿನಾಚರಣೆಯಂದು ಪೋಲಿಸ್ ಮಹಾನಿರ್ದೇಶಕರು ಹಾಗೂ ಗೃಹರಕ್ಷಕದಳ ಮಾಹಾ ಸಮಾದೇಷ್ಠರಾದ ಕಮಲ್ ಪಂತ್ (ಐ.ಪಿ.ಎಸ್) ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಗೃಹರಕ್ಷಕದಳ ಉಪ ಮಹಾ ಸಮಾದೇಷ್ಠರಾದ ಅಕ್ಷಯ.ಎಂ.ಹಾಕೆ (ಐ.ಪಿ.ಎಸ್.), ಅಗ್ನಿಶಾಮಕ ಇಲಾಖೆ ಡಿ.ಐ.ಜಿ.ರವಿ.ಡಿ. ಚೆನ್ನಣ್ಣ ವರ್ (ಐ.ಪಿ.ಎಸ್.) ಹಾಗೂ ಉನ್ನತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.