ಪಂಜ:ವನಿತಾ ಸಮಾಜದ ವಾರ್ಷಿಕೋತ್ಸವ

0

ವನಿತಾ ಸಮಾಜ ಪಂಜ ಇದರ ವಾರ್ಷಿಕೋತ್ಸವ ಜರಗಿತು.
ನಿವೃತ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಕಮಲ ಬಿಡಾರಕಟ್ಟೆ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.


ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಮಾಲಿನಿ ಕುದ್ವ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷೆ ಶ್ರೀಮತಿ ಪುಷ್ಪಾ ಡಿ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ಮಹಿಳೆಯರಿಗೆ ಚೀಟಿ ಎತ್ತಿ ಕನ್ನಡದಲ್ಲಿ ಭಾಷಣ, ಜಾನಪದ ಗೀತೆ ಲಕ್ಕಿಗೇಮ್ಸ್, ಭಾರತದ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಪೂರ್ವಾದ್ಯಕ್ಷೆ ಶ್ರೀಮತಿ ವೇದಾವತಿ ಮೋನಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸಿ ಬಹುಮಾನ ವಿತರಿಸಿದರು.ಪೂರ್ವಧ್ಯಕ್ಷೆ ಶ್ರೀಮತಿ ತುಳಸಿ ಚೀಮುಳ್ಳು ಸ್ಪರ್ಧಾ ವಿಜೇತರ ಪಟ್ಟಿಯನ್ನು ವಾಚಿಸಿದರು. ಕಾರ್ಯದರ್ಶಿ ಶ್ರೀಮತಿ ಪವಿತ್ರ ಕುದ್ವ ವಂದಿಸಿದರು