ಅರಂತೋಡು-ಸಂಪಾಜೆ ವಲಯದ ಯುವಕ-ಯುವತಿ ಮಂಡಲಗಳ ತರಬೇತಿ ಕಾರ್ಯಗಾರ

0

ಯುವಜನ ಸಂಯುಕ್ತ ಮಂಡಳಿ(ರಿ) ಸುಳ್ಯ ಇದರ ಆಶ್ರಯದಲ್ಲಿ ಸ್ಪಂದನ ಗೆಳೆಯರ ಬಳಗ (ರಿ) ಅಡ್ತಲೆ ಇದರ ಸಂಯೋಜನೆಯೊಂದಿಗೆ ವಲಯದ ಯುವಕ-ಯುವತಿ ಮಂಡಲಗಳ ಸಹಯೋಗದೊಂದಿಗೆ ಅರಂತೋಡು ಗ್ರಾಮ ಪಂಚಾಯತ್ ಅಮೃತ ಸಭಾಂಗಣದಲ್ಲಿ ಯಶಸ್ಸು ಕನಸಲ್ಲ ಎಂಬ ವಿಷಯದ ಕುರಿತು ಒಂದು ದಿನದ ತರಭೇತಿ ಕಾರ್ಯಾಗಾರ ಡಿ. 17 ರಂದು ನಡೆಯಿತು.

ಅಧ್ಯಕ್ಷತೆಯನ್ನು ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ಪ್ರವೀಣ್ ಕುಮಾರ್ ಎ.ಎಮ್ ವಹಿಸಿದ್ದರು.

ತರಬೇತಿ ಕಾರ್ಯಾಗಾರವನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಜೇ.ಸೀ.ಸೋಮಶೇಖರ ನೇರಳ, ಯುವಜನ ಸಂಯುಕ್ತ ಮಂಡಳಿಯ ಪೂರ್ವಾಧ್ಯ ಶೈಲೇಶ್ ಅಂಬೆಕಲ್ಲು, ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ವಿನಯ್ ಬೆದ್ರುಪಣೆ , ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕ ಸುಬ್ರಮಣಿ ಪಿ.ವಿ ಹಾಗೂ ಲೋಹಿತ್ ಬಾಳಿಕಳ ಹಾಗೂ ವಲಯದ ಯುವಕ ಮಂಡಲಗಳ ಅಧ್ಯಕ್ಷರುಗಳು ಹಾಜರಿದ್ದರು.

ವಿನಯ್ ಬೆದ್ರುಪಣೆ ಸ್ವಾಗತಿಸಿ, ಲೋಹಿತ್ ಬಾಳಿಕಳ ಇವರು ವಂದಿಸಿದರು. ರಂಜಿತ್ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು. ನಂತರ ಜೆ.ಸಿ.ಐ ಭಾರತ ಇದರ ವಲಯ ತರಬೇತುದಾರರಾದ ಜೇ.ಸೀ ಸೋಮಶೇಖರ ನೇರಳ ಇವರಿಂದ ಯಶಸ್ಸು ಕನಸಲ್ಲ Success is not a dream…ವಿಷಯದ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು. ವಲಯದ ಎಲ್ಲಾ ಯುವಕ ಯುವತಿ ಮಂಡಲಗಳ ಸದಸ್ಯರು ತರಬೇತಿ ಕಾರ್ಯಗಾರದ ಸದುಪಯೋಗ ಪಡೆದುಕೊಂಡರು.