ಸುಳ್ಯ ತಾಲೂಕು ಯಾದವ ಕ್ರೀಡಾಕೂಟ ಉದ್ಘಾಟನೆ

0

ಕರ್ನಾಟಕ ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು ಇದರ ಸುಳ್ಯ ತಾಲೂಕು ಸಮಿತಿಯ ಆಶ್ರಯದಲ್ಲಿ ಯಾದವ ಸಮಾವೇಶ 2023ರ ಪ್ರಯುಕ್ತ ಯಾದವ ಕ್ರೀಡಾಕೂಟವು ಡಿ.17ರಂದು ಸುಳ್ಯದ ಸ.ಪ.ಪೂ.‌ಕಾಲೇಜಿನ ಯುವಜನ ಸಂಯುಕ್ತ ಮಂಡಳಿ ಕಟ್ಟಡದ ಬಳಿಯ ಕ್ರೀಡಾಂಗಣದಲ್ಲಿ ಡಿ‌.17ರಂದು ಜರುಗಿತು.

ಕ್ರೀಡಾಕೂಟವನ್ನು ಯಾದವ ಸಭಾ ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ. ಮಣಿಯಾಣಿ ಬೆಳ್ಳಾರೆ ಹಾಗೂ ಸುಳ್ಯ ತಾಲೂಕು ಸಮಿತಿ ಮಾಜಿ ಅಧ್ಯಕ್ಷ ಕಣಕ್ಕೂರು ಕೊರಗಪ್ಪ ಮಾಸ್ತರ್ ಅವರು ಜಂಟಿಯಾಗಿ ಉದ್ಘಾಟಿಸಿ, ಶುಭಹಾರೈಸಿದರು.

ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಅವರು ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಯಾದವ ಸಭಾ ತಾಲೂಕು ಮಹಿಳಾ ಸಮಿತಿ ಅಧ್ಯಕ್ಷೆ ಶ್ರೀಮತಿ ರಾಜೀವಿ ಪರ್ಲಿಕಜೆ, ಯುವ ವೇದಿಕೆ ಅಧ್ಯಕ್ಷ ವಿನೋದ್ ಕೊಯಿಂಗಾಜೆ ಉಪಸ್ಥಿತರಿದ್ದರು. ಶ್ರೀಮತಿ ಸಾವಿತ್ರಿರಾಮ್ ಸ್ವಾಗತಿಸಿ, ಶ್ರೀಮತಿ ರಾಜೀವಿ ಪರ್ಲಿಕಜೆ ವಂದಿಸಿದರು.


ಬಳಿಕ ಕ್ರೀಡಾಕೂಟಕ್ಕೆ ಕ್ರಿಕೆಟ್ ಆಡುವ ಮೂಲಕ ಚಾಲನೆ ನೀಡಲಾಗಿದ್ದು, ಯಾದವ ಸಮುದಾಯದ ವಿದ್ಯಾರ್ಥಿಗಳು, ಪುರುಷರು, ಮಹಿಳೆಯರು ಹಾಗೂ ಹಿರಿಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗುತ್ತಿದ್ದು, ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಡಿ.25ರಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಜರುಗುವ ತಾಲೂಕು ಯಾದವ ಸಮಾವೇಶದಲ್ಲಿ ಬಹುಮಾನ ವಿತರಣೆ ನಡೆಯಲಿದೆ.