ಕಾಳಮ್ಮನೆ ತರವಾಡು ದೈವಸ್ಥಾನದಿಂದ ಅಡ್ಕಾರು ಷಷ್ಠಿ ಮಹೋತ್ಸವಕ್ಕೆ ಹೊರೆಕಾಣಿಕೆ ಸಮರ್ಪಣೆ

0

ಜಾಲ್ಸುರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಡಿ.18ರಂದು ನಡೆಯುವ ಷಷ್ಠಿ ಮಹೋತ್ಸವಕ್ಕೆ ಕಾಳಮ್ಮನೆ ತರವಾಡು ದೈವಸ್ಥಾನದಿಂದ ಡಿ.17 ರಂದು ಸಂಜೆ ಹಸಿರು ವಾಣಿ ಸಮರ್ಪಿಸಲಾಯಿತು.

ಕುಟುಂಬದ ಯಜಮಾನ ಜೆ.ಕೆ ವಸಂತ ಗೌಡ, ಕಾಂತಪ್ಪ ಮಾಸ್ಟರ್ ಬದಿಯಡ್ಕ, ಚಿನ್ನಪ್ಪ ಗೌಡ ಬದಿಯಡ್ಕ, ಪದ್ಮನಾಭ ಗೌಡ ಬದಿಯಡ್ಕ, ಜೆ.ಕೆ ಜಯಂತ ಗೌಡ ಕಾಳಮ್ಮನೆ, ಗಂಗಾಧರ ಕಾಳಮ್ಮನೆ
ಅಶೋಕ್ ಗೌಡ ಬದಿಯಡ್ಕ, ಯಜ್ಞೆಶ್ ಕಾಳಮ್ಮನೆ ಮೊದಲಾದವರು ಉಪಸ್ಥಿತರಿದ್ದರು.