ನಾವೂರು: ಕಳಪೆ ಕಾಮಗಾರಿ ರಸ್ತೆಗೆ ಮರು ಕಾಂಕ್ರೀಟೀಕರಣ

0

ಸ್ಥಳೀಯರ ಆಕ್ರೋಶದಿಂದ ಒಂದೇ ವರ್ಷದಲ್ಲಿ ಎರಡು ಬಾರಿ ಕಾಂಕ್ರೀಟೀಕರಣಗೊಂಡ ರಸ್ತೆ

ಸುಳ್ಯ ಸಂತೋಷ್ ಟಾಕೀಸ್ ಬಳಿಯಿಂದ ಬೋರುಗುಡ್ಡೆಗೆ ಸಂಪರ್ಕಿಸುವ ನಾವೂರು ರಸ್ತೆಯನ್ನು ಕಳೆದ 8 ತಿಂಗಳ ಹಿಂದೆ ಕಾಂಕ್ರೀಟಿಕರಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.

ಆದರೆ ಕಾಮಗಾರಿ ಪೂರ್ಣಗೊಂಡು ಕೇವಲ 3 ತಿಂಗಳುಗಳಲ್ಲಿಯೇ ರಸ್ತೆ ಅಲ್ಲಲ್ಲಿ ಬಿರುಕುಗಳು ಮತ್ತು ಹೊಂಡಗಳು ನಿರ್ಮಾಣವಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ರಸ್ತೆಯ ಕಾಮಗಾರಿಯಲ್ಲಿ ಕಳಪೆ ನಡೆದಿದೆ ಎಂದು ಸ್ಥಳೀಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ನಗರ ಪಂಚಾಯತ್ ಮುಖ್ಯ ಅಧಿಕಾರಿಗಳಿಗೆ ಮತ್ತು ಮಂಗಳೂರು ಮುಖ್ಯ ಕಛೇರಿಗೆ ಕಳೆಪೆ ಕಾಮಗಾರಿಯ ಕುರಿತು ದೂರನ್ನು ನೀಡಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಮಾಹಿತಿಯನ್ನು ಪಡೆದು ಕೂಡಲೇ ರಸ್ತೆ ದುರಸ್ತಿ ಪಡಿಸಿ ಕೊಡುವುದಾಗಿ ಭರವಸೆಯನ್ನು ನೀಡಿದ್ದರು. ಅದರಂತೆ ಕಳೆದ ಎರಡು ದಿನಗಳಿಂದ ಮರು ಕಾಂಕ್ರೀಟೀಕರಣಗೊಂಡು ಸುಮಾರು ನಾಲಕ್ಕು ಇಂಚು ಕಾಂಕ್ರೀಟೀಕರಣಗೊಳಿಸಿ ರಸ್ತೆಯನ್ನು ದುರಸ್ತಿ ಪಡೆಸಿಕೊಡುವ ಕಾಮಗಾರಿ ನಡೆದಿದೆ.