ದೊಡ್ಡತೋಟ – ಮರ್ಕಂಜ ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ

0

ದೊಡ್ಡತೋಟ ಮರ್ಕಂಜ ರಸ್ತೆಯ ಕೊರತ್ತೋಡಿ ಭಾಗದಲ್ಲಿ ಚಿರತೆಯೊಂದು ರಿಕ್ಷಾ ಚಾಲಕನಿಗೆ ಕಾಣ ಸಿಕ್ಕಿದ ಘಟನೆ ಇದೀಗ ರಾತ್ರಿ ವರದಿಯಾಗಿದೆ.

ದೊಡ್ಡತೋಟದಲ್ಲಿ ರಿಕ್ಷಾ ಚಾಲಕರಾಗಿರುವ ಗಂಗಾಧರ ಎಂಬವರು ತನ್ನ ರಿಕ್ಷಾದಲ್ಲಿ ಬಾಡಿಗೆಗೆ ಮರ್ಕಂಜ ಕಡೆಗೆ ಹೋಗಿ ಸುಮಾರು 8 ಗಂಟೆಯ ಹೊತ್ತಿಗೆ ಹಿಂತಿರುಗಿ ಬರುತ್ತಿದ್ದಾಗ ಕೊರತ್ತೋಡಿ ಎಂಬಲ್ಲಿ‌ ಚಿರತೆಯೊಂದು ಕಾಡಿನಿಂದ ಬಂದು ರಸ್ತೆ ದಾಟಿ ಬೊಳ್ಳಾಜೆ ಕಡೆಯ ಕಾಡಿಗೆ ಹೋಗಿದೆ. ದೊಡ್ಡ ಗಾತ್ರದ‌ ಚಿರತೆ ಕಾಣಸಿಕ್ಕಿದ ಕಾರಣ ರಿಕ್ಷಾ ಚಾಲಕರು ಭಯಭೀತರಾದರಲ್ಲದೇ ಆ ರಸ್ತೆಯಲ್ಲಿ ಸಿಕ್ಕಿದವರಿಗೂ ಚಿರತೆ ದಾಟಿದ ಮಾಹಿತಿ‌ ನೀಡಿದರು.

ಮರ್ಕಂಜದ ಕಟ್ಟಕ್ಕೋಡಿ ಚೀಮಾಡು ಪರಿಸರದಲ್ಲಿ ಕೆಲ ದಿನಗಳ ಹಿಂದೆಯೂ ಚಿರತೆ ಕಾಣಸಿಕ್ಕಿತ್ತಲ್ಲದೇ, ಕರುವನ್ನು‌ ಎಳೆದಿಯ್ದಿತ್ತು. ಮತ್ತು ನಾಯಿಗಳನ್ನು ಎಲೆದೊಯ್ಯಲು ಪ್ರಯತ್ನಿಸಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಠಿಯಾಗಿತ್ತು.
ಇದೀಗ ಚಿರತೆ ಮತ್ತೆ ದೊಡ್ಡತೋಟ – ಮರ್ಕಂಜ ರಸ್ತೆಯಲ್ಲಿ ಕಾಣಸಿಕ್ಕಿದ್ದು ಜನರಲ್ಲಿ ಮತ್ತೆ ಆತಂಕ‌ ಹುಟ್ಟಿಸಿದೆ.