ಕನಕಮಜಲು ಗ್ರಾಮದಲ್ಲಿ ಬೀಡುಬಿಟ್ಟಿರುವ ಒಂಟಿ ಸಲಗ

0

ಕುದ್ಕುಳಿ, ಕಾಪಿಲ, ಮುಗೇರಿನಲ್ಲಿ ಕೃಷಿಕರ ತೋಟಕ್ಕೆ ನಿರಂತರ ದಾಳಿ

ಮಂಡೆಕೋಲು, ಮುರೂರು, ಬೆಳ್ಳಿಪ್ಪಾಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸಿ, ಕೃಷಿ ವಸ್ತುಗಳನ್ನು ಹಾನಿ ಮಾಡುತ್ತಿದ್ದ ಕಾಡಾನೆಗಳ ಪೈಕಿ ಒಂಟಿ ಸಲಗವೊಂದು ಗುಂಪಿನಿಂದ ಬೇರ್ಪಟ್ಟು, ಕನಕಮಜಲು ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಕಳೆದ ಮೂರು ದಿ‌ನಗಳಿಂದ ಗ್ರಾಮದ ಕೃಷಿಕರ ತೋಟಕ್ಕೆ ನಿರಂತರವಾಗಿ ದಾಳಿ ಮಾಡಿ, ಕೃಷಿ ಹಾನಿಗೊಳಿಸುತ್ತಿದೆ.

ಸ್ಥಳೀಯ ಮಾಹಿತಿಯಂತೆ ಒಟ್ಟು ಹತ್ತು ಆನೆಗಳಿದ್ದು, ಕಳೆದ ಕೆಲವು ದಿನಗಳಿಂದ ಮುರೂರು, ಪಂಜಿಕಲ್ಲು, ಪರಿಸರದಲ್ಲಿದ್ದು, ಈ ಗುಂಪಿನಿಂದ ಬೇರ್ಪಟ್ಟಿರುವ ಒಂಟಿ ಸಲಗವೊಂದು ಕಳೆದ ಮೂರು ದಿನಗಳಿಂದ ಕನಕಮಜಲು ಗ್ರಾಮದ ಕುದ್ಕುಳಿ, ಕಾಪಿಲ, ಮುಗೇರು ಪರಿಸರದಲ್ಲಿ ನಿರಂತರವಾಗಿ ರಾತ್ರಿಯ ವೇಳೆ ಕೃಷಿಕರ ತೋಟಕ್ಕೆ ದಾಳಿ ನಡೆಸುತ್ತಿದ್ದು, ಈ ಭಾಗದ ಕೃಷಿಕರ ನಿದ್ದೆಗೆಡಿಸಿದೆ.