ಜಾಲ್ಸೂರು: ಅಂಗಡಿ ಮಾಲಕರೆದುರೇ, ನಗದು ಕಳವುಗೈದ ಮಂಗಳಮುಖಿ ಮಹಿಳೆ

0

ಮಂಗಳಮುಖಿ ಮಹಿಳೆಯೋರ್ವಳು ಅಂಗಡಿಯೊಂದರಿಂದ ಅಂಗಡಿ ಮಾಲಕರ ಎದುರೇ, ಅವರಿಗೆ ತಿಳಿಯದೇ, ನಗದು ಕಳವುಗೈದ ಘಟನೆ ಡಿ.20ರಂದು ಸಂಭವಿಸಿದೆ.

ಜಾಲ್ಸೂರಿನ ಶ್ರೀನಿವಾಸ ಕಾಂಪ್ಲೆಕ್ಸ್ ನಲ್ಲಿ ಅಂಗಡಿ ನಡೆಸುತ್ತಿರುವ ದೇವಪ್ಪ ನಾಯ್ಕ ಮಹಾಬಲಡ್ಕ ಎಂಬವರ ಅಂಗಡಿಗೆ ಬಂದ ಮಂಗಳಮುಖಿ ಮಹಿಳೆಯೋರ್ವಳು ಅಂಗಡಿ ಒಳಗೆ ಬಂದು, ಅಂಗಡಿ ಮಾಲಕರ ಎದುರಲ್ಲೇ , ಅವರಿಗೆ ತಿಳಿಯದಂತೆ ಡ್ರಯರ್ ಗೆ ಕೈ ಹಾಕಿ ನಗದು ಕಳವುಗೈದಿದ್ದು, ಈ ದೃಶ್ಯ ಅಂಗಡಿಯಲ್ಲಿದ್ದ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ.