ಸ್ನೇಹದಲ್ಲಿ ಸೂರ್ಯಾಲಯದ ವಾರ್ಷಿಕೋತ್ಸವ

0


“ಮಂತ್ರೋಚ್ಛಾರಣೆಯಿಂದ ದೇವರು ಸಂತೃಪ್ತಗೊಳ್ಳುತ್ತಾನೆ. 2016ನೇ ವರ್ಷದಿಂದ ಪ್ರಾರಂಭಗೊಂಡು ಇಲ್ಲಿಯವರೆಗೆ ನಾವು ಸೂರ್ಯದೇವರ ಆರಾಧನೆಯನ್ನು ಪ್ರತಿ ವರ್ಷ ಡಿಸೆಂಬರ್ ನಲ್ಲಿ ಆಚರಿಸಿಕೊಂಡು ಬಂದಿರುತ್ತೇವೆ. ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಸೂರ್ಯ ಚಲಿಸುವ ಈ ಶುಭ ಸಮಯದಲ್ಲಿ ನಾವು ಸೂರ್ಯಾಲಯದ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ” ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಇವರು ಸೇರಿರತಕ್ಕಂತಹ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಮಕ್ಕಳು ಸೂರ್ಯಾಸ್ಟಕ,ಗಣಪತಿ ಅಥರ್ವಶೀರ್ಷ, ರಾಮರಕ್ಷೆ, ಗಾಯತ್ರೀ ಮಂತ್ರ ಇತ್ಯಾದಿ ಶ್ಲೋಕಗಳನ್ನು ಸುಮಾರು ಒಂದು ಗಂಟೆಯ ಕಾಲ ಪಠಿಸುವ ಮೂಲಕ ಪೂಜಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಪೌರೋಹಿತ್ಯ ವಹಿಸಿದ ಸಂಸ್ಥೆಯ ಅಧ್ಯಕ್ಷರು ಶ್ಲೋಕದ ಅರ್ಥವನ್ನು ವಿವರಿಸುವುದರ ಮೂಲಕ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸಿದರು.


ನಂತರ ಸೂರ್ಯದೇವರಿಗೆ ಶಾಲಾ ವಿದ್ಯಾರ್ಥಿಗಳು, ಹೆತ್ತವರು ಮತ್ತು ಶಿಕ್ಷಕ ವೃಂದದವರು ಅಭಿಷೇಕ ಮಾಡಿ ಪುನೀತರಾದರು.
ಕೊನೆಯಲ್ಲಿ ಮಾತಾಪಿತೃಪೂಜನ ನಡೆಯುವುದರ ಮೂಲಕ ಮಕ್ಕಳು ಹೆತ್ತವರ ಹಾಗೂ ಗುರುಗಳ ಆಶೀರ್ವಾದವನ್ನು ಪಡೆದುಕೊಂಡರು.


ದಿನಾಂಕ 21.12.2023 ರಂದು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸೂರ್ಯಾಲಯದ ವಾರ್ಷಿಕೋತ್ಸವದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.