ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಧನುಷ್ ಕಲ್ಲುಮುಟ್ಲು ಆಯ್ಕೆ

0

ಹದಿನೇಳು ವರ್ಷದ ಒಳಗಿನ ಬಾಲಕರ ವಿಭಾಗದ ಎಸ್.ಜಿ.ಎಫ್.ಐ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ರಾಜ್ಯಮಟ್ಟದಿಂದ ಆಯ್ಕೆಯಾಗಿ ಕರ್ನಾಟಕ ತಂಡವನ್ನು ಧನುಷ್ ಕಲ್ಲುಮುಟ್ಟು ರವರು ಪ್ರತಿನಿಧಿಸುತ್ತಿದ್ದಾರೆ. ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟವು ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಡಿಸೆಂಬರ್ 27 ರಿಂದ ಜನವರಿ 6 ರ ವರೆಗೆ ನಡೆಯುಲಿದೆ.

ಧನುಷ್ ಕಲ್ಲುಮುಟ್ಲು ರವರು ಪ್ರಸ್ತುತ ಅದಮಾರು ಮಠದ ವಿಡಿಯ ಪೂರ್ಣ ಪ್ರಜ್ಞ ಹೈಸ್ಕೂಲ್ ಬೆಂಗಳೂರು ಇಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವರು ಕಲ್ಲುಮುಟ್ಲು ನಾಗೇಶ್ ಕುಮಾರ್ ಮತ್ತು ಶ್ರೀಮತಿ ತಿಲೋತ್ತಮೆ ದಂಪತಿಯವರ ಪುತ್ರ.