ಮಾವಿನಕಟ್ಟೆ : ಸಾರ್ವಜನಿಕ ಶನಿಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ

0

ಶ್ರೀ ಕ್ಷೇ.ಧ.ಗ್ರಾ.ಯೋಜನೆ ಮಾವಿನಕಟ್ಟೆ (ದೇವಚಳ್ಳ) ಒಕ್ಕೂಟ ಇದರ ವತಿಯಿಂದ ಸಾರ್ವಜನಿಕ ಶನಿಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಡಿ.23ರಂದು ನಡೆಯಿತು.

ಬೆಳಿಗ್ಗೆ 9 ರಿಂದ ಸಾರ್ವಜನಿಕ ಶನಿಪೂಜೆ ನಡೆಯಿತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಧ.ಗ್ರಾ.ಯೋ. ಮಾವಿನಕಟ್ಟೆ ಒಕ್ಕೂಟದ ಅಧ್ಯಕ್ಷ ಬಾನುಪ್ರಕಾಶ್ ತಳೂರು ವಹಿಸಿದ್ದರು. ಸುಳ್ಯ ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಶ್ರೀ ಧ.ಗ್ರಾ.ಯೋ. ಗುತ್ತಿಗಾರು ವಲಯದ ಅಧ್ಯಕ್ಷ ಯೋಗೀಶ್ ದೇವ, ಮೇಲ್ವಿಚಾರಕ ಬಾಲಕೃಷ್ಣ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಮೇಶ್ ಮೆಟ್ಟಿನಡ್ಕ ಕಾರ್ಯಕ್ರಮ ನಿರೂಪಿಸಿದರು.