ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನೆ

0

ಕೆ.ವಿ.ಜಿ ಕಾನೂನು ಕಾಲೇಜಿನಲ್ಲಿ ೨೦೨೩-೨೪ನೇ ಸಾಲಿನ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಡಿ. ೨೩ರಂದು ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಅಧ್ಯಕ್ಷರಾದ ಡಾ.ಕೆ.ವಿ. ಚಿದಾನಂದ ಇವರು ವಹಿಸಿದ್ದರು. ಎಂ.ಬಿ ಸಂಸ್ಥೆಯ ಸಂಸ್ಥಾಪಕ ಮತ್ತು ಲಯನ್ಸ್ ಜಿಲ್ಲಾಪೂರ್ವ ರಾಜ್ಯಪಾಲರಾಗಿದ್ದ ಎಂ.ಬಿ ಸದಾಶಿವರವರು ಉದ್ಘಾಟಕರಾಗಿ ಹಾಗೂ ಪದ್ಮಶ್ರಿ ಪ್ರಶಸ್ತಿ ಪುರಸ್ಕೃತ ಕೈಗಾರಿಕೋದ್ಯಮಿ ಡಾ. ಗಿರೀಶ್ ಭಾರದ್ವಜ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಉದಯಕೃಷ್ಣ. ಬಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಉಪನ್ಯಾಸಕಿ ಟೀನಾ. ಹೆಚ್.ಎಸ್ ಮತ್ತು ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಟೀನಾ.ಹೆಚ್. ಎಸ್ ಪ್ರಮಾಣವಚನ ಬೋಧಿಸಿದರು.


ವಿದ್ಯಾರ್ಥಿನಿ ಶುತಿ ರಾಧಾಕೃಷ್ಣನ್ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಪ್ರೊ. ಉದಯಕೃಷ್ಣ. ಬಿ, ಸ್ವಾಗತಿಸಿ, ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷ ಸಚಿನ್ ಹೆಚ್.ಆರ್ ವಂದಿಸಿದರು. ಉಪನ್ಯಾಸಕಿ ಉಷಾ ಸಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.