ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಕ್ರಿಸ್‌ಮಸ್ ಹಬ್ಬ ಆಚರಣೆ

0

ಕೆಂಪು ಬಣ್ಣದ ಡ್ರೆಸ್‌ನೊಂದಿಗೆ ಕ್ರಿಸ್‌ಮಸ್ ಹಾಡಿಗೆ ಹೆಜ್ಜೆ ಹಾಕಿದ ಪುಟಾಣಿಗಳು

ಸುಳ್ಯದ ವರ್ತಕರ ಭವನದಲ್ಲಿ ಕಾರ್ಯಚರಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಡಿ.23 ರಂದು ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಯಿತು.
ಶಾಲೆಯನ್ನು ಕ್ರಿಸ್‌ಮಸ್ ಟ್ರೀ, ಗೂಡುದೀಪ, ಬಲೂನ್‌ನಿಂದ ಶೃಂಗಾರಿಸಲಾಗಿತ್ತು. ಪುಟಾಣಿ ಮಕ್ಕಳು ಕೆಂಪು ಬಣ್ಣದ ಡ್ರೆಸ್‌ನೊಂದಿಗೆ ಕ್ರಿಸ್‌ಮಸ್ ಹಾಡಿಗೆ ಹೆಜ್ಜೆ ಹಾಕಿದರು.

ಶಾಲಾ ಸಂಚಾಲಕಿ ಗೀತಾಂಜಲಿ ಟಿ.ಜಿ. ಹಬ್ಬದ ಕುರಿತು ಪುಟಾಣಿ ಮಕ್ಕಳಿಗೆ ತಿಳಿಸಿಕೊಟ್ಟರು. ಹಾಗೂ ಕೇಕ್, ಸ್ವೀಟ್ ಹಂಚಿ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಯಿತು. ಶಿಕ್ಷಕಿ ನಿರ್ಮಲ, ಸಹಾಯಕಿ ಶ್ವೇತಾ ಸಹಕರಿಸಿದರು.