ಸಿ.ಎ ಬ್ಯಾಂಕ್ ಚುನಾವಣೆಗೆ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಅಭ್ಯರ್ಥಿಗಳನ್ನು ಘೋಷಿಸಿದ ಹರೀಶ್ ಕಂಜಿಪಿಲಿ

0

ಸುಳ್ಯ ಸಿ.ಎ ಬ್ಯಾಂಕ್ 2024-28ರ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯ ಅಧಿಕೃತ ಅಭ್ಯರ್ಥಿಗಳನ್ನು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಇಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ಕಳೆದ 1992ರ ನಂತರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸತತವಾಗಿ ಗೆಲ್ಲುತ್ತಿದ್ದು 32 ವರ್ಷಗಳಿಂದ ಉತ್ತಮ ಆಡಳಿತವನ್ನು ನೀಡುತ್ತಿವೆ. ಪ್ರಸ್ತುತ ಸಂದರ್ಭದಲ್ಲಿ ನೂತನ ಕಟ್ಟಡದ ರಚನೆ ಕೆಲಸ ಕಾರ್ಯ ಭರದಿಂದ ನಡೆಯುತ್ತಿದ್ದು ಸಂಘವು ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ. ಮುಂದಿನ ದಿನಗಳಲ್ಲಿ ಕೂಡ ಉತ್ತಮ ಆಡಳಿತವನ್ನು ನೀಡುವ ಭರವಸೆಯನ್ನು ನಾವು ಮತದಾರರಿಗೆ ನೀಡುತ್ತಿzವೆ ಎಂದು ಹರೀಶ್ ಕಂಜಿಪಿಲಿ ಹೇಳಿದರು. 2022-23ನೇ ಸಾಲಿನಲ್ಲಿ ಶೇಕಡಾ 20 ಡಿವಿಡೆಂಟ್ ಅನ್ನು ಘೋಷಣೆ ಮಾಡಲಾಗಿತ್ತು.

ಮುಂದಿನ ಅವಧಿಗೆ ಕೂಡ ಅಭ್ಯರ್ಥಿಗಳ ಉತ್ತಮ ತಂಡವನ್ನು ಆಯ್ಕೆ ಮಾಡಿದ್ದು ಅವರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಈಗಾಲೇ ಆಗಿದೆ. ಚುನಾವಣೆ ಎಂದಾಗ ಆಕಾಂಕ್ಷಿಗಳು ಸರ್ವೆ ಸಾಮಾನ್ಯವಾಗಿ ಹೆಚ್ಚಾಗಿ ಇರುತ್ತಾರೆ. ಹಿರಿಯ ಸಲಹೆ ಸೂಚನೆಗಳ್ನು ಪಡೆದು ಎಲ್ಲರ ಸಹಮತದೊಂದಿಗೆ ಅಂತಿಮವಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಆದ್ದರಿಂದ ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಅವರು ಹೇಳಿದರು.

ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಎನ್.ಎ.ರಾಮಚಂದ್ರ, ಶಿವರಾಮ ಕೇರ್ಪಳ, ಪ್ರಭೋದ್ ಶೆಟ್ಟಿ ಮೇನಾಲ, ವಿಕ್ರಮ್ ಅಡ್ಪಂಗಾಯ, ವಾಸುದೇವ ಪುತ್ತಿಲ, ವೆಂಕಟ್ರಮಣ ಮುಳ್ಯ, ಮಹಿಳಾ ಮೀಸಲು ಕ್ಷೇತ್ರದಿಂದ ನವ್ಯ ಚಂದ್ರಶೇಖರ್, ಹರಿಣಾಕ್ಷಿ ಬೇಲ್ಯ, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಹೇಮಂತ ಕುಮಾರ್ ಕಂದಡ್ಕ, ಹಿಂದುಳಿದ ವರ್ಗ ಬಿ ಮೀಸಲು ಕ್ಷೇತ್ರದಿಂದ ಬಾಲಗೋಪಾಲ ಸೇರ್ಕಜೆ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಚಂದ್ರಶೇಖರ ದೊಡ್ಡೇರಿ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಕೇಶವ ಸಿ.ಎ. ಹೊಸಗದ್ದೆ, ಸಾಲಗಾರರಲ್ಲದ ಕ್ಷೇತ್ರದಿಂದ ನ್ಯಾಯವಾದಿ ಚಂದ್ರಶೇಖರ ನಡುಮನೆ ಸೋಣಂಗೇರಿ ನಮ್ಮ ಅಧಿಕೃತ ಅಭ್ಯರ್ಥಿಗಳಾಗಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರುಗಳಾದ ಸುಭೋದ್ ಶೆಟ್ಟಿ ಮೇನಾಲ, ಎನ್.ಎ.ರಾಮಚಂದ್ರ, ವೆಂಕಟ್ ದಂಬೆಕೋಡಿ, ಎ.ವಿ.ತೀರ್ಥರಾಮ, ಎಸ್.ಎನ್.ಮನ್ಮಥ, ವಿನಯ ಕುಮಾರ್ ಕಂದಡ್ಕ, ಚನಿಯ ಕಲ್ತಡ್ಕ, ಬಾಲಗೋಪಾಲ ಸೇರ್ಕಜೆ ಮೊದಲಾದವರು ಇದ್ದರು.