ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ವಾರ್ಷಿಕೋತ್ಸವ

0

ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ 26ನೇ ವಾರ್ಷಿಕೋತ್ಸವ ಡಿ. 23ರಂದು ನಡೆಯಿತು. ತರಬೇತುದಾರ, ಲೇಖಕ ಜಯಪ್ರಕಾಶ್ ನಾಗತಿಹಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದರು. ಸಂಸ್ಥೆಯ ಸಂಚಾಲಕರಾದ ಎಂ.ಪಿ. ಉಮೇಶ್, ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ದೇಚಮ್ಮ ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಧನುಷ್ ರಾಮ್ ಸ್ವಾಗತಿಸಿದರು. ಸಂಸ್ಥೆಯ ಪ್ರಾಂಶುಪಾಲೆ ಶ್ರೀಮತಿ ದೇಚಮ್ಮ ಟಿ ವಾರ್ಷಿಕ ವರದಿ ವಾಚಿಸಿದರು. ಶ್ರೀಮತಿ ರಜನಿ ಉಮೇಶ್, ಉಡುಪಿ ಬಾಳಿಗ ಫಿಶ್ ನೆಟ್ ಸಂಸ್ಥೆಯ ನಿರ್ದೇಶಕ ಅಖಿಲ್ ಬಾಳಿಗ, ಸಂಸ್ಥೆಯ ಟ್ರಸ್ಟಿ ಶ್ರೀಮತಿ ಅಕಾಂಕ್ಷ ಬಾಳಿಗ ಬಹುಮಾನ ವಿತರಿಸಿದರು. ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಮೋಂಟಡ್ಕ ಪುಟ್ಟಣ್ಣ ಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಕು. ತ್ರಾಯಿ ಭಟ್ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಕು. ಸ್ತುತಿ ಭಟ್ ಮತ್ತು ಸಯದ್ ಅಫಾಮ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಶ್ರೀಮತಿ ಗೀತಾ, ಶ್ರೀಮತಿ ಜಯಶ್ರೀ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶ್ರೀಮತಿ ಪ್ರತಿಮಾ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳ ಹೆಸರು ವಾಚಿಸಿದರು.

ಮುಖದಲ್ಲಿ ಕಲೆ ಬರಬೇಕಾದರೆ ಮನಸ್ಸನ ಕೊಳೆಯನ್ನು ತೊಳೆಯಬೇಕು. ವಿದ್ಯಾರ್ಥಿಗಳು ಒಂದು ಹಂತದವರೆಗೆ ಅಂಕಗಳ ಬಗ್ಗೆ ಗಮನ ಕೊಡುವುದರ ಜೊತೆಗೆ ಸಾಧನೆಯ ಕಡೆಗೆ ಗಮನ‌ಕೊಡಿ. ಪೋಷಕರು ತಮ್ಮ ಮಕ್ಕಳಿಗೆ ಏನು ಬೇಕು ಅದನ್ನು ಓದಿಸಿ. ಬೇರೆಯವರೊಂದಿಗೆ ತಾಳೆ ಮಾಡಬೇಡಿ. ಶಿಕ್ಷಕಿಯರು ಮಗುವಿಗೆ ಎರಡನೇ ಅಮ್ಮ. ಹಾಗೆಂದು ಶಾಲೆಗೆ ಸೇರಿಸಿದ್ದಲ್ಲಿಗೆ ನಮ್ಮ ಕೆಲಸ ಮುಗೀತು ಎಂದು ಭಾವಿಸಬೇಡಿ. ಪ್ರತಿಯೊಬ್ಬರೂ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಿದಾಗ ಎಲ್ಲರೂ ಸಂತೋಷವಾಗಿರಬಹುದು- ಜಯಪ್ರಕಾಶ್ ನಾಗತಿಹಳ್ಳಿ