ಕಾಡುಸೊರಂಜ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಕೊಟ್ಟಿಗೆ ಬೆಂಕಿಗಾಹುತಿ

0

ರಬ್ಬರ್ ಶೀಟ್, ತೆಂಗಿನಕಾಯಿ, ಅಡಿಕೆ ಸಂಪೂರ್ಣ ನಾಶ – ಮೂರು ಲಕ್ಷ ನಷ್ಟ

ಬೆಂಕಿ ನಂದಿಸಿದ ಅಗ್ನಿಶಾಮಕ ದಳ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮವಾಗಿ ಮನೆಯ ಪಕ್ಕದ ಕೊಟ್ಟಿಗೆ ಬೆಂಕಿಗಾಹುತಿಯಾದ ಘಟನೆ ಮಂಡೆಕೋಲು ಗ್ರಾಮದ ಕಾಡುಸೊರಂಜದಲ್ಲಿ ಡಿ.23ರಂದು ಸಂಜೆ ಸಂಭವಿಸಿದೆ.

ಕಾಡುಸೊರಂಜದ ಕರುಣಾಕರ ಎಂಬವರ ಮನೆಯ ಪಕ್ಕದಲ್ಲಿದ್ದ ಕೊಟ್ಟಿಗೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಪರಿಣಾಮವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೊಟ್ಟಿಗೆ ಸಂಪೂರ್ಣ ನಾಶವಾಗಿದ್ದು, ಅಗ್ನಿಶಾಮಕ ದಳದವರು ಬಂದು ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಿದರೆಂದು ತಿಳಿದುಬಂದಿದೆ.

ಬೆಂಕಿ ಹೊತ್ತುಕೊಂಡ ಪರಿಣಾಮವಾಗಿ ಕೊಟ್ಟಿಗೆ ಒಳಗಿದ್ದ ಸುಮಾರು ಒಂದು ಕ್ವಿಂಟಾಲ್ ನಷ್ಟು ರಬ್ಬರ್ ಶೀಟ್, ಏಳುನೂರಕ್ಕೂ ಅಧಿಕ ತೆಂಗಿನಕಾಯಿ, ಸ್ವಲ್ಪ ಪ್ರಮಾಣದ ಅಡಿಕೆ, ಸೇರಿದಂತೆ ಮನೆ ಬಳಕೆಯ ಅಗತ್ಯ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಹೊತ್ತಿ ಉರಿದಿದ್ದು, ಸುಮಾರು ಮೂರು ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.