ಕೇರ್ಪಳದಲ್ಲಿ ಪಯಸ್ವಿನಿ ಸಂಭ್ರಮ

0

ಸಾಧಕರಿಗೆ ಪಯಸ್ವಿನಿ ಗೌರವ ಪ್ರದಾನ

ಸುಳ್ಯ ಕೇರ್ಪಳದ ಪಯಸ್ವಿನಿ ಯುವಕ ಮಂಡಲದ 30 ನೇ ವರ್ಷದ ಸವಿನೆನಪಿಗಾಗಿ ಕೇರ್ಪಳ ಶಾಲಾ ವಠಾರದಲ್ಲಿ ಪಯಸ್ವಿನಿ ಸಂಭ್ರಮ ಕಾರ್ಯಕ್ರಮ ಡಿ.23ರಂದು ನಡೆಯಿತು.

ಅಪರಾಹ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಶ್ರೀ ಚೆನ್ನಕೇಶವ ಮಹಿಳಾ ಭಜನಾ ಮಂಡಳಿ ಸುಳ್ಯ ಇವರಿಂದ ಭಜನಾ ಸಂಭ್ರಮ, ಬಳಿಕ ಸ್ಥಳೀಯ ಅಂಗನವಾಡಿ, ಕೇರ್ಪಳ ಶಾಲೆ ಹಾಗೂ ಊರಿನ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೊದಾವಳಿಗಳು ನಡೆಯಿತು.

ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಮಂಜುನಾಥ್, ಪದ್ಮಶ್ರೀ ಗಿರೀಶ್ ಭಾರದ್ವಾಜ್, ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಜಯನಗರ, ನಗರ ಪಂಚಾಯತ್ ಸದಸ್ಯರುಗಳಾದ ಪೂಜಿತಾ, ಸುಧಾಕರ್, ರಿಯಾಜ್ ಕಟ್ಟೆಕಾರ್, ಪಯಸ್ವಿನಿ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಶಿವಾನಂದ ಕುರುಂಜಿ, ಕೇರ್ಪಳ ಶಾಲಾ ಮುಖ್ಯ ಶಿಕ್ಷಕಿ ಹೊನ್ನಮ್ಮ, ಕೇರ್ಪಳ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಉಷಾ, ಯುವಕ ಮಂಡಲ ಕಾರ್ಯದರ್ಶಿ ಭರತ್ ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ಸಾಧಕರಿಗೆ ಹಾಗೂ ಯುವಕ ಮಂಡಲಕ್ಕೆ ಪ್ರೋತ್ಸಾಹ ನೀಡಿದ ಗಣ್ಯರಿಗೆ ಪಯಸ್ವಿನಿ ಗೌರವ ನೀಡಲಾಯಿತು.

ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಕೇರ್ಪಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿನ್ಯಾಸ್ ಕುರುಂಜಿ, ವಿನಯ್ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಕಲಾವಿದರಿಂದ ಭಾವಗಾನ, ಬಳಿಕ ಅಮ್ಮ ಕಲಾವಿದರ್ ಕುಡ್ಲ ಇವರಿಂದ ಅಮ್ಮೆರ್ ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆಯಲಿದೆ.