ಎನ್.ಎಮ್.ಸಿ 1993ರಲ್ಲಿ ಬಿಕಾಂ ಪದವಿ ಪೂರೈಸಿದ ವಿದ್ಯಾರ್ಥಿಗಳ ಸ್ನೇಹಸಮ್ಮಿಲನ

0

ಸುಳ್ಯದ ಎನ್.ಎಂ.ಸಿಯಲ್ಲಿ 1993ರಲ್ಲಿ ಬಿಕಾಂ ಪದವಿ ಪೂರೈಸಿದ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಸಮಾರಂಭವು ಡಿ 24ರಂದು ಎನ್. ಎಂ.ಸಿಯ ಸಭಾಭವನದಲ್ಲಿ ನಡೆಯಿತು.
ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿವೃತ ಪ್ರಾಂಶುಪಾಲ ಮತ್ತು ಎನ್. ಎಂ. ಸಿಯ ಸಲಹೆಗಾರರಾಗಿರುವ ಪ್ರೊ. ಬಾಲಚಂದ್ರ ಗೌಡ ಮಾತನಾಡಿ ಹಳೆ ವಿದ್ಯಾರ್ಥಿಗಳಿಗೆ ಕಾಲೇಜಿನ ಮೇಲಿರುವ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಹಳೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
1993ರಲ್ಲಿ ಬಿಕಾಂ ಉಪನ್ಯಾಸಕರಾಗಿದ್ದ ಗಿರಿಧರ ಗೌಡ ರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾನಾಡಿದ ಅವರು ಹಳೆವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದರು.
ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ರುದ್ರ ಕುಮಾರ್ ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ರತ್ನಾವತಿ ಎಲ್ಲರಿಗೂ ಶುಭಕೋರಿದರು, ಉಪನ್ಯಾಸಕ ಶ್ರೀ ಹರಿಪ್ರಸಾದ್ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು. ಸುಬೋದ್ ಶೆಟ್ಟಿ ಮೇನಾಲ ಕಾರ್ಯಕ್ರಮ ನಿರೂಪಿಸಿದರು.
ಹಳೆ ವಿದ್ಯಾರ್ಥಿಗಳು ತಾವು ಬಿ ಕಾಂ ಅಂತಿಮ ವರ್ಷ ಪೂರೈಸಿದ ತಮ್ಮದೇ ಬೆಂಚ್ ನ ತಮ್ಮದೇ ಜಾಗದಲ್ಲಿ ಕುಳಿತು ಸಂಭ್ರಮಿಸಿದರು.