ಡಿ 29 : ಸುಳ್ಯದಲ್ಲಿ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಬೃಹತ್ ಜಾಥಾ ಅಭಿಯಾನ

0

ಬ್ಯಾಂಡ್ ವಾದ್ಯಗಳೊಂದಿಗೆ ಜಾಥಾದಲ್ಲಿ ಭಾಗಿಯಾಗಲಿರುವ ವಿದ್ಯಾರ್ಥಿಗಳು

ಸುಳ್ಯ ಪೊಲೀಸ್ ಠಾಣಾ ವತಿಯಿಂದ ಅಪರಾಧ ತಡೆ ಮಾಸಾಚರಣೆ ಡಿಸೆಂಬರ್ -2023 ಪ್ರಯುಕ್ತ ಸುಳ್ಯ ಪೊಲೀಸ್ ಠಾಣಾ / ಸುಳ್ಯ ವೃತ್ತ ಅಧಿಕಾರಿ ಮತ್ತು ಸಿಬ್ಬಂದಿಯವರು ಹಾಗೂ ವರ್ತಕರ ಸಂಘ ಸುಳ್ಯ,ರೋಟರಿ ಕ್ಲಬ್ ಸುಳ್ಯ ಸಿಟಿ /ರೋಟರಿ ಕ್ಲಬ್ ಸುಳ್ಯ,ಕಾರು ಮಾಲಕರು/ಚಾಲಕರ ಸಂಘ ಸುಳ್ಯ, ಖಾಸಗಿ ಬಸ್ಸು ಮಾಲಕರು / ಚಾಲಕರ ಸಂಘ ಸುಳ್ಯ, ಸುಳ್ಯ ಆಟೋ ಚಾಲಕರ ಸಂಘದವರ ನೇತೃತ್ವದಲ್ಲಿ ಡಿ 29 ರಂದು ಸುಳ್ಯದಲ್ಲಿ ಅಪರಾಧ ತಡೆ ಮಸಾಚರಣೆಯ ಬೃಹತ್ ಜಾಥಾ ಮತ್ತು ಜನಜಾಗ್ರತಿ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 09:30 ಗಂಟೆಗೆ ಸುಳ್ಯ ಜ್ಯೋತಿ ವೃತ್ತದಿಂದ ಜಾಥಾ ಆರಂಭಗೊಂಡು ಮುಖ್ಯ ಪೇಟೆಯಲ್ಲಿ ಸಂಚರಿಸಿ ಗಾಂಧಿನಗರ ಪೆಟ್ರೋಲ್ ಬಂಕ್ ಬಳಿಯಿಂದ ಬಂದು ಸುಳ್ಯ ಪೊಲೀಸ್ ಠಾಣಾ ವಠಾರದಲ್ಲಿ ಸಮಾರೋಪ ಗೊಳ್ಳಲಿದೆ.
ಬಳಿಕ 10:30 ಗಂಟೆಗೆ ಪೊಲೀಸ್ ಉಪನೀರಿಕ್ಷಕರು ಮತ್ತು ವೃತ್ತ ನಿರೀಕ್ಷಕರು ಸುಳ್ಯ ರವರಿಂದ ರೋಟರಿ ಕ್ಲಬ್ ಸಭಾಭವನದಲ್ಲಿ ಸುಳ್ಯ ನಗರ ವಾಹನ ಸಂಚಾರ ದಟ್ಟಣೆ ನಿಯಂತ್ರಣದ ಬಗ್ಗೆ ಸಭೆ ನಿಗದಿಪಡಿಸಿದ್ದು ಎಲ್ಲಾ ಸಂಘ ಸಂಸ್ಥೆ ಯವರು ಕ್ಲಪ್ತ ಸಮಯದಲ್ಲಿ ಜಾಥಾ ಮತ್ತು ಸಭೆಯಲ್ಲಿ ಹಾಜರಾಗಿ ಸಹಕರಿಸುವಂತೆ ಸುಳ್ಯ ಪೊಲೀಸ್ ಠಾಣಾಧಿಕಾರಿ ಮತ್ತು ಸಿಬ್ಬಂದಿಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.