ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶೌಚಾಲಯ ನಿರ್ಮಾಣಕ್ಕೆ ಗುದ್ದಲಿ ಪೂಜೆ

0

ಐವರ್ನಾಡು ಗ್ರಾಮ ಪಂಚಾಯತ್ ನರೇಗಾ ಯೋಜನೆ ಮತ್ತು ಶಿಕ್ಷಣ ಇಲಾಖೆ ಅನುದಾನ ಒಗ್ಗೂಡಿಸುವಿಕೆಯೊಂದಿಗೆ ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡಿನಲ್ಲಿ ರೂ 5.20 ಲಕ್ಷ ರೂ. ವೆಚ್ಚದಲ್ಲಿ ನೂತನ ಶೌಚಾಲಯ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆಯು ಜ.01 ರಂದು ನಡೆಯಿತು.


ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ ಹಾಗೂ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಪಿಡಿಒ ಶ್ಯಾಮ್ ಪ್ರಸಾದ್,ಕಾಲೇಜಿನ ಪ್ರಾಂಶುಪಾಲ ಇಸಾಕ್, ಗ್ರಾಮ ಪಂಚಾಯತ್ ಸದಸ್ಯ ಸತೀಶ ಜಬಳೆ,ಶಾಂತಾರಾಮ ಕಣಿಲೆಗುಂಡಿ,ವಾಸುದೇವ ನಿಡುಬೆ,ಮಹೇಶ ಜಬಳೆ,ಚಂದ್ರಶೇಖರ,ಕುಸುಮಾಧರ ಮಡ್ತಿಲ, ಅರುಣ್ ಗುತ್ತಿಗಾರುಮೂಲೆ,ರಾಜೇಶ್ ಭಟ್ ಬಾಂಜಿಕೋಡಿ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.