ಕೆವಿಜಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಹೊಸ ವರ್ಷದ ಆಚರಣೆ

0

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹೊಸ ವರ್ಷವನ್ನು ಜ. 1ರಂದು ಆಚರಿಸಲಾಯಿತು.


ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ವಿದ್ಯಾರ್ಥಿಗಳ ಜೊತೆ ಸೇರಿ ನೆರೆದಿರುವ ಎಲ್ಲರಿಗೂ ಪ್ರದರ್ಶನ ಫಲಕದ ಮೂಲಕ ಶುಭಾಶಯವನ್ನು ಕೋರುತ್ತಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಬಳಿಕ ದಿನದ ವಿಶೇಷತೆಯ ಕುರಿತು 7ನೇ ತರಗತಿಯ ನಿಯಾ ಶೆಟ್ಟಿ, 12 ತಿಂಗಳುಗಳ ಹೆಸರಿನ ಹಿನ್ನೆಲೆಯ ಕುರಿತು ಸಂಕ್ಷಿಪ್ತವಾಗಿ 7ನೇ ತರಗತಿಯ ಮೋಹಕ್ ಮತ್ತು ಮನಸ್ವಿ ಮಾಹಿತಿಯನ್ನು ನೀಡಿದರು.

2024ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ನಿರ್ಣಯಗಳ ಬಗ್ಗೆ ಏಳನೇ ತರಗತಿಯ ಧನ್ವಿ ರಮಣ್ ತಿಳಿಸಿದನು. ಕಾರ್ಯಕ್ರಮದ ನಿರೂಪಣೆಯನ್ನು ಏಳನೇ ತರಗತಿಯ ಅನಿಂದ್ಯ ಶ್ಯಾಮ್, ಸಾತ್ವಿಕ್ ಮತ್ತು ಆಯಿಷಾ ಹನಿಯ ಮಾಡಿದರು. ಈ ಸಂದರ್ಭದಲ್ಲಿ ಏಳನೇ ತರಗತಿಯ ವಿದ್ಯಾರ್ಥಿಗಳಿಂದ ಹಲವಾರು ಮನರಂಜನಾ ಕಾರ್ಯಕ್ರಮಗಳು ನೆರವೇರಲ್ಪಟ್ಟಿತ್ತು.

ಪ್ರಾಂಶುಪಾಲರಾದ ಅರುಣ್ ಕುಮಾರ್ ಮಾತನಾಡಿ “ನಾವು ಈ ಹೊಸವರ್ಷದಲ್ಲಿ ನಮ್ಮ ಜೀವನದಲ್ಲಿ ಧನಾತ್ಮಕವಾಗಿ ಚಿಂತಿಸಿ, ಶಿಸ್ತುಬದ್ಧವಾದ ಜೀವನವನ್ನು ನಡೆಸಿ, ಎಲ್ಲಾ ರೀತಿಯ ಸುಖ ಸಂತೋಷಗಳನ್ನು ಪಡೆಯಬೇಕೆಂದು ಶುಭ ಹಾರೈಸಿದರು.

ಬಳಿಕ ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಆಗಮಿಸಿ ಕೇಕ್ ಕತ್ತರಿಸುವುದರ ಮೂಲಕ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕ- ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.