ಪೆರಾಜೆ ದೇವಸ್ಥಾನದಿಂದ ಮನೆ ಮನೆಗೆ ಅಯೋಧ್ಯಾ ಮಂತ್ರಾಕ್ಷತೆ ವಿತರಣೆಗೆ ಚಾಲನೆ

0

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಮಂತ್ರಾಕ್ಷತೆಯನ್ನು ಮನೆ ಮನೆಗೆ ವಿತರಿಸುವ ಕಾರ್ಯಕ್ಕೆ ಜ.01 ರಂದು ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.


ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ, ಪೆರಾಜೆ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರ್, ಶುಭಾಶ್ಚಂದ್ರ ಬಂಗಾರಕೋಡಿ, ಚಿನ್ನಪ್ಪ ಅಡ್ಕ, ದೀನರಾಜ್ ದೊಡ್ಡಡ್ಕ, ಸೀತಾರಾಮ ಕದಿಕಡ್ಕ, ಚಿನ್ನಪ್ಪ ಕಾಸ್ಪಾಡಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಜ.೧ರಿಂದ ಗ್ರಾಮದ ಪ್ರತೀ ಹಿಂದೂ ಬಾಂಧವರ ಮನೆಗೆ ವಿತರಿಸುವ ಕಾರ್ಯ ನಡೆಯಲಿದೆ.