ಸಂಪಾಜೆ ಜೂನಿಯರ್ ಕಾಲೇಜ್ ಕಚೇರಿ ಸಹಾಯಕಿ ಸುಮತಿ ಗಂಗಾಧರ್ ನಿವೃತ್ತಿ

0

ಸಂಪಾಜೆಯ ಸಂಪಾಜೆ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕಚೇರಿ ಸಹಾಯಕರಾಗಿದ್ದ ಶ್ರೀಮತಿ ಸುಮತಿ ಗಂಗಾಧರ್ ದ.31 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ.

ದಿ|ಗಂಗಾಧರ ಕಣಕ್ಕೂರುರವರ ಧರ್ಮಪತ್ನಿ ಶ್ರೀಮತಿ ಸುಮತಿ ಗಂಗಾಧರ್‌ರವರು ಮಡಿಕೇರಿ ತಾಲೂಕಿನ ಪಾರಾಣೆಯಲ್ಲಿ 1993 ರಲ್ಲಿ ಕಚೇರಿ ಸಹಾಯಕರಾಗಿ ನೇಮಕಗೊಂಡಿದ್ದರು. 2003 ರಲ್ಲಿ ಸಂಪಾಜೆ ಜೂನಿಯರ್ ಕಾಲೇಜಿಗೆ ವರ್ಗಾವಣೆಯಾಗಿ ಬಂದ ಅವರು ಅಲ್ಲಿ 20 ವರ್ಷಗಳ ಸೇವೆಯ ಬಳಿಕ ಇದೀಗ ನಿವೃತ್ತರಾಗಿದ್ದಾರೆ. ಇವರು ಕೋಲ್ಚಾರಿನ ಕಣಕ್ಕೂರು ನಿವಾಸಿಯಾಗಿದ್ದು, ಪುತ್ರಿ ದಿಶಾ ಕಣಕ್ಕೂರು ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ.