ವಳಲಂಬೆ ಶಾಲೆಯಲ್ಲಿ ಕ್ರೀಡೋತ್ಸವ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಳಲಂಬೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ , ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಸಂಘ ದವರ ಆಶ್ರಯದಲ್ಲಿ ಡಿ. 31 ರಂದು ಕ್ರೀಡೋತ್ಸವ ನಡೆಯಿತು.
ರಾಜ್ಯ ಸರಕಾರಿ ನೌಕರರ ಸಂಘ, ಸುಳ್ಯ ತಾಲೂಕು ಇದರ ಅಧ್ಯಕ್ಷರು, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷರಾದ ತೀರ್ಥರಾಮ ಹೆಚ್‌.ಬಿ ಹೊಸೋಳಿಕೆಯವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.


ಅಧ್ಯಕ್ಷತೆಯನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ಪುರ್ಲುಮಕ್ಕಿ ವಹಿಸಿದ್ದರು.
ಗುತ್ತಿಗಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸನತ್ ಮುಳುಗಾಡು ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷರಾದ ಪರಮೇಶ್ವರ ಭಟ್, ಮುಖ್ಯ ಅತಿಥಿಗಳಾಗಿದರು.


ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರವಿಕುಮಾರ್ ಮೊಟ್ಟೆ ಉಪಾಧ್ಯಕ್ಷರಾದ ನಳಿನಾಕ್ಷಿ ಪಂಜಿಪಳ್ಳಿ , ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿ ಎಚ್ ,ವಿದ್ಯಾರ್ಥಿ ನಾಯಕ ವಿಜಿತ್ ಎಂ‌.ಜಿ ಉಪಸ್ಥಿತರಿದ್ದರು.


ಪ್ರಭಾರ ಮುಖ್ಯ ಶಿಕ್ಷಕಿ ಪ್ರಮೀಳಾ ಪಿ.ಎಸ್ ಪ್ರಾಸ್ತವಿಕ ಮಾತನಾಡಿದರು. ರವೀಶ್ ಕುಮಾರ್ ಮೊಟ್ಟೆ ಸ್ವಾಗತಿಸಿದರು , ಸಚಿನ್ ಮೊಟ್ಟೆ ವಂದಿಸಿದರು. ಸಹ ಶಿಕ್ಷಕಿ ಗೀತಾಲಕ್ಷ್ಮಿ ನಿರೂಪಿಸಿದರು. ಊರಿನವರಿಗೆ, ಹಿರಿಯ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.