ಆಲೆಟ್ಟಿ : ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಮೃತ್ಯು

0


ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ವರದಿಯಾಗಿದೆ.

ಆಲೆಟ್ಟಿ ಗ್ರಾಮ ಮೊರಂಗಲ್ಲು ಕಾಲನಿ ನಿವಾಸಿ ದಿ. ಕುಶಾಲಪ್ಪರವರ ಪುತ್ರ , ಅರಂತೋಡಿನ ಸರ್ವೀಸ್ ಸ್ಟೇಷನ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಅಶೋಕ ಎಂಬಾತ ಡಿ. ೨೮ರಂದು ವಿಷ ಪ್ರಾಶನ ಮಾಡಿ ತಡರಾತ್ರಿ ಮನೆಗೆ ಬಂದಾಗ ವಿಷಯ ತಿಳಿದ ಮನೆಯವರು ತಕ್ಷಣ ಸ್ಥಳೀಯರ ಜೊತೆ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸುರತ್ಕಲ್‌ನಲ್ಲಿರುವ ಶ್ರೀನಿವಾಸ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಪ್ರಮಾಣದಲ್ಲಿ ವಿಷ ಸೇವಿಸಿದ್ದ ಪರಿಣಾಮವಾಗಿ ನಿನ್ನೆ ತಡರಾತ್ರಿ ಚಿಕಿತ್ಸೆ ಫಲಿಸದೆ ಮೃತಪಟಟ್ಟಿರುವುದಾಗಿ ತಿಳಿದುಬಂದಿದೆ. ಮೃತ ಯುವಕನ ತಾಯಿ ಶ್ರೀಮತಿ ಲೀಲಾವತಿ, ಸಹೋದರ ಮಂಜೇಶ್, ಹಾಗೂ ಕುಟುಂಬಸ್ಥರನ್ನು, ಬಂಧುಮಿತ್ರರನ್ನು ಅಗಲಿದ್ದಾರೆ.