ಸುಳ್ಯ ಶಾಸಕರು ಬಿಜೆಪಿ ಪಕ್ಷದ ಚಿಹ್ನೆಯನ್ನು ಸರಕಾರಿ ಕಚೇರಿಯಲ್ಲಿ ಹಾಕಿಕೊಂಡು, ಪಕ್ಷದ ಅಧ್ಯಕ್ಷ – ಕಾರ್ಯದರ್ಶಿಗಳನ್ನು ಕೂರಿಸಿ – ಸರಕಾರಿ ಅಧಿಕಾರಿಗಳ ಸಭೆ ನಡೆಸುವುದು ಎಷ್ಟು ಸರಿ?:ಎಂ ವೆಂಕಪ್ಪ ಗೌಡ ಪ್ರಶ್ನೆ

0

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರು ತನ್ನ ಪಕ್ಷದ ಅಧ್ಯಕ್ಷರು ಹಾಗು ಕಾರ್ಯದರ್ಶಿಗಳನ್ನು ತಾಲೂಕು ಪಂಚಾಯತ್ ನ ಶಾಸಕರ ಕಚೇರಿಯಲ್ಲಿ ಕೂರಿಸಿಕೊಂಡು ಮೆಸ್ಕಾಂ ಅಧಿಕಾರಿಗಳ ಸಭೆಯನ್ನು ಕರೆದಿರುವುದು ಎಷ್ಟು ಸರಿ ?” ಎಂದು‌ ಕೆ.ಪಿ.ಸಿ.ಸಿ. ಮಾಜಿ ಅಧ್ಯಕ್ಷ ‌ಹಾಗೂ ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಪ್ರಶ್ನಿಸಿದ್ದಾರೆ.

ಇಂತಹ ಸಭೆಗೆ ಹೋಗುವ ಅಧಿಕಾರಿಗಳು ,ತಾವು ಸರಕಾರದಿಂದ ಸಂಬಳ ತೆಗೆದುಕೊಂಡು ಸರಕಾರಿ ಸೇವೆಯಲ್ಲಿ ಇದ್ದೇವೆ ಎಂಬುದನ್ನು ಮರೆತಿದ್ದಾರೆಯೇ ? ಅಥವಾ ಈ ಬಗ್ಗೆ ತಿಳಿದುಕೊಳ್ಳುವರೇ ಅಧಿಕಾರಿಗಳಿಗೆ ತಿಳುವಳಿಕೆ ಕೊರತೆ ಇದೆಯಾ ? ಆಥವಾ ತಾವು ಏನು ಬೇಕಾದರೂ ಮಾಡಬಹುದು ಎಂಬ ಅಹಂಕಾರದಿಂದ ಈ ರೀತಿಯ ವರ್ತನೆಯೇ ? ಎಂಬುದನ್ನು ಇವತ್ತು ಜನ ಸಾಮಾನ್ಯ ಪ್ರಶ್ನೆ ಮಾಡುವ ಕಾಲ ಬಂದಿದೆ . ಅದೇ ರೀತಿ ಒಬ್ಬ ಜಿಲ್ಲಾ ಪಂಚಾಯತ್ ಸದಸ್ಯೆ ಆಗಿ ಕಾರ್ಯ ನಿರ್ವಹಿಸಿದ್ದ ಶಾಸಕರು ಕೂಡಾ ಶಾಸಕರ ಕಚೇರಿಯಲ್ಲಿ ತಮ್ಮ ಹೆಸರಿನ ಮೇಲೆ ಬಿಜೆಪಿ ಪಕ್ಷದ ಚಿಹ್ನೆ ಹಾಕಿಕೊಂಡಿರುವುದು ಸರಿಯೇ? ಅಂದರೆ ಅಲ್ಲಿಗೆ ಎಲ್ಲರೂ ಬರುತ್ತಾರೆ. ಆ ಕಚೇರಿ ಸಾರ್ವಜನಿಕ ಕಚೇರಿಯಾಗಿದ್ದು ಅದು ಸರಕಾರದಿಂದ ಸಾರ್ವಜನಿಕರಿಗೆ ಉಪಯೋಗ ಆಗಲಿ ಅಂತ ಕೊಡಮಾಡಿದ್ದು ವಿನಃ ಪಕ್ಷದ ಕಚೇರಿಯಲ್ಲ ಎಂಬುದನ್ನು ತಿಳಿದುಕೊಳ್ಳದೆ ಹೋಗಿರೋದು ದುರಂತವಲ್ಲವೇ ? ಎಂಬ ಪ್ರಶ್ನೆ ಸಹಜವಾಗಿಯೆ ಉದ್ಭವಿಸುತ್ತದೆ. ಅದರಲ್ಲೂ ಕೆಲವೊಂದು ಅಧಿಕಾರಿಗಳು ಕರ್ನಾಟಕದಲ್ಲಿ ಬಿಜೆಪಿ ಸರಕಾರವೇ ಇದೆ ಅಂತ ತಿಳಿದುಕೊಂಡಂತಿದೆ. ಈ ವರ್ತನೆಗಳನ್ನು ಮುಂದಿನ ದಿನಗಳಲ್ಲಿ ಅಧಿಕಾರಿಗಳು ತಿಳಿದುಕೊಳ್ಳದಿದ್ದಲ್ಲಿ ನಮ್ಮ ಜಿಲ್ಲಾ ಉಸ್ತುವಾರಿಗಳ ಗಮನಕ್ಕೆ ತರುವಲ್ಲಿ ಹಿಂದೇಟು ಹಾಕುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.