ಜಾಲ್ಸೂರು: ಸಾರ್ವಜನಿಕ ಶೌಚಾಲಯಕ್ಕೆ ಕಿಡಿಗೇಡಿಗಳಿಂದ ತೊಂದರೆ

0

ಗ್ರಾ.ಪಂ. ವತಿಯಿಂದ ಸ್ವಚ್ಛತೆ

ಜಾಲ್ಸೂರು ಗ್ರಾಮ ಪಂಚಾಯತಿ ಬಳಿ ಇರುವ ಸಾರ್ವಜನಿಕ ಶೌಚಾಲಯದ ಒಳಗೆ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿ ಹಾಗೂ ಮದ್ಯದ ಪ್ಯಾಕೇಟುಗಳನ್ನು ಎಲ್ಲೆಂದರಲ್ಲಿ ಬಿಸಾಡಿ, ಕಿಡಿಗೇಡಿಗಳು ತೊಂದರೆ ನಡೆಸಿದ್ದು , ಗ್ರಾಮ ಪಂಚಾಯತಿ ವತಿಯಿಂದ ಜ.3ರಂದು ಸ್ವಚ್ಛಗೊಳಿಸಲಾಗಿದೆ.

ಸಾರ್ವಜನಿಕ ಶೌಚಾಲಯವಾದ ಕಾರಣ ಗ್ರಾಮ ಪಂಚಾಯತಿ ವತಿಯಿಂದ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು, ಪ್ರವಾಸಿಗರು , ಶಬರಿಮಲೆ ಯಾ‌ತ್ರಿಕರು ರಾತ್ರಿಯ ವೇಳೆ ಬಂದು ಉಪಯೋಗಿಸುತ್ತಿದ್ದು, ಕಿಡಿಗೇಡಿಗಳು ನೀರಿನ ಖಾಲಿ ಬಾಟಲಿಗಳನ್ನು ಹಾಗೂ ಖಾಲಿ ಮದ್ಯದ ಪ್ಯಾಕೇಟುಗಳನ್ನು ಶೌಚಾಲಯದ ಒಳಗೆ ಬಿಸಾಡಿದ್ದು, ಕಸಕಡ್ಡಿಗಳಿಂದ ತುಂಬಿದ್ದು ಗ್ರಾಮ ಪಂಚಾಯತಿ ವತಿಯಿಂದ ಜ.3ರಂದು ಬೆಳಿಗ್ಗೆ ಸ್ವಚ್ಛತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಜಾಲ್ಸೂರು ಕೇರಳ ಹಾಗೂ ಕರ್ನಾಟಕದ ಜಂಕ್ಷನ್ ಆಗಿದ್ದು, ಇಲ್ಲಿ ಪ್ರತಿನಿತ್ಯ ಹಲವಾರು ಪ್ರಯಾಣಿಕರು, ಪ್ರವಾಸಿಗರು, ಯಾತ್ರಿಕರು ಬರುತ್ತಿದ್ದು, ಸಾರ್ವಜನಿಕರ ಉಪಯೋಗಕ್ಕಾಗಿ ಇಲ್ಲಿ ಶೌಚಾಲಯವನ್ನು ನಿರ್ಮಿಸಲಾಗಿದೆ.