ಸುಳ್ಯ‌ ನ.ಪಂ. ಆವರಣದಲ್ಲಿ ಯುದ್ಧ ಸ್ಮಾರಕ ಸಿದ್ಧ

0

ಜ.26ರಂದು ಲೋಕಾರ್ಪಣೆಗೆ ನಿರ್ಧಾರ

ಸುಳ್ಯ‌ ನಗರ ಪಂಚಾಯತ್ ವತಿಯಿಂದ ನ.ಪಂ. ಆವರಣದಲ್ಲಿ ಯುದ್ಧ ಸ್ಮಾರಕ ನಿರ್ಮಾಣಗೊಂಡಿದ್ದು ಜ.26ರಂದು‌ ಗಣರಾಜ್ಯೋತ್ಸವ ದಿನದಂದು ಲೋಕಾರ್ಪಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ಈ ಕುರಿತು ಇಂದು ನಗರ ಪಂಚಾಯತ್ ಆವರಣದಲ್ಲಿ ಚರ್ಚಿಸಲಾಯಿತು.

ಎ.ಒ.ಎಲ್.ಇ. ಅಧ್ಯಕ್ಷ ಡಾ.ಚಿದಾನಂದ ಕೆ.ವಿ., ಸೈನಿಕರ ಸಂಘದ ಅಧ್ಯಕ್ಷ ‌ಕೆ.ಪಿ.ಜಗದೀಶ್, ಮಾಜಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ, ಕಾರ್ಯದರ್ಶಿ ‌ಮೋನಪ್ಪ ಗೌಡ, ನ.ಪಂ. ಮಾಜಿ ಅಧ್ಯಕ್ಷ ವಿನಯ ಕಂದಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಸುಧಾಕರ್, ಸೈನಿಕರ ಸಂಘದ ಸದಸ್ಯರು ಮೊದಲಾದವರಿದ್ದು ಚರ್ಚೆ ನಡೆಯಿತು.