ಸುಳ್ಯದಲ್ಲಿ ಬ್ಯಾನರ್ ಹರಿದ ಪ್ರಕರಣ : ಜೆಡಿಎಸ್ ಖಂಡನೆ

0
 ಸುಳ್ಯದ ಖಾಸಗಿ ಬಸ್ ನಿಲ್ದಾಣ ಬಳಿ ಸುಳ್ಯ ತಾಲೂಕು ಆಟೋ ಚಾಲಕರು ಹಾಗೂ ಮಾಲಕರ ಸಂಘದ ವತಿಯಿಂದ  ಅಯೋಧ್ಯೆಯ ರಾಮಮಂದಿರ ಹಾಗೂ ಸುಳ್ಯ ಜಾತ್ರೋತ್ಸವಕ್ಕೆ ಶುಭ ಕೋರಿ ಅಳವಡಿಸಲಾಗಿದ್ದ ಬ್ಯಾನರ್ ಗಳನ್ನು  ಜ.6ರಂದು ಯಾರೋ ಕಿಡಿಗೇಡಿಗಳು ಹರಿದು ಹಾಳುಗೆಡವಿ ವಿಕೃತಿಯನ್ನು ಮೆರೆದಿರುತ್ತಾರೆ. ಈ ಪ್ರಕರಣವನ್ನು ಪೋಲಿಸ್ ಇಲಾಖೆ ಈ ಕೂಡಲೇ ಬೇಧಿಸಿ ಅಪರಾಧಿಗಳನ್ನು ಕಂಡುಹಿಡಿದು ಬಂಧಿಸಿ ಶಿಕ್ಷಿಸುವಂತೆಯೂ ಆಗ್ರಹಿಸುತ್ತದೆ. ಹಾಗೆಯೇ ಸಾರ್ವಜನಿಕರು  ತಾಳ್ಮೆ ಮತ್ತು ಸಂಯಮದಿಂದ  ವರ್ತಿಸಬೇಕಾಗಿ ಸುಳ್ಯ ತಾಲೂಕು ಜನತಾದಳ (ಜಾ) ಮನವಿ ಮಾಡಿದೆ.