ಸುಳ್ಯದಲ್ಲಿ ರಾಮ ಮಂದಿರ ಲೋಕಾರ್ಪಣೆ ಬ್ಯಾನರ್ ಹರಿದ ಪ್ರಕರಣ :

0

ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಖಂಡನೆ

ಸುಳ್ಯದಲ್ಲಿ ಕೆಲವು ಕಿಡಿಗೇಡಿಗಳು ರಾಮ ಮಂದಿರ ಲೋಕಾರ್ಪಣೆ ಬ್ಯಾನರ್ ಹರಿದದ್ದು ಅತ್ಯಂತ ಆತಂಕದ ವಿಷಯ. ಇದನ್ನು ಯುವ ಮೋರ್ಚಾ ಖಂಡಿಸುತ್ತದೆ.
ಹಲವಾರು ವರ್ಷಗಳ ಸತತ ಹೋರಾಟದ ನಂತರ ಅಯೋಧ್ಯೆಯಲ್ಲಿ ಈಗ ರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಅದಕ್ಕೆ ಇಂತಹ ಕೃತ್ಯಕ್ಕೆ ಕೈ ಹಾಕುತ್ತಾರೆ

ಅಂಥವರನ್ನು ಪೊಲೀಸ್ ಇಲಾಖೆ ಶೀಘ್ರದಲ್ಲಿ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು.ನೆನಪಿಡಿ, ಹಿಂದೂಗಳು ಕಾನೂನಿಗೆ ಬೆಲೆ ಕೊಡುತ್ತಾರೆ
ಕೈಲಾಗದವ ಮೈ ಪರಚಿಕೊಂಡ ಅನ್ನುವ ಹಾಗೆ ನೀವು ಒಂದು ಬ್ಯಾನರ್ ಹರಿಯಬಹುದು, ಇನ್ನೂ ನೂರು ಬ್ಯಾನರ್ ಹಾಕುವ ಶಕ್ತಿ ನಮಗಿದೆ. ಬಿಜೆಪಿ ಯುವ ಮೋರ್ಚಾ ಸದಾ ರಾಮನ ಮತ್ತು ರಾಮ ಭಕ್ತರ ಪರವಾಗಿ ನಿಲ್ಲುತ್ತದೆ.ಎಂದು ಸುಳ್ಯ ಮಂಡಲ ಬಿ ಜೆ ಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ತಿಳಿಸಿದ್ದಾರೆ.