ಬೆಳ್ಳಾರೆ : ಲಕ್ಷ್ಮೀ ಸಂಜೀವಿನಿ ಒಕ್ಕೂಟ ವತಿಯಿಂದ ಹಾಳೆ ತಟ್ಟೆ ತಯಾರಿಕಾ ಘಟಕ ಉದ್ಘಾಟನೆ

0

ಬೆಳ್ಳಾರೆ ಗ್ರಾಮ ಪಂಚಾಯತ್ ಮಟ್ಟದ ಲಕ್ಷ್ಮೀ ಸಂಜೀವಿನಿ ಒಕ್ಕೂಟದ ವತಿಯಿಂದ ಬೆಳ್ಳಾರೆಯ ಇಂದಿರಾನಗರದಲ್ಲಿ ಹಾಳೆತಟ್ಟೆ ತಯಾರಿಕಾ ಘಟಕವು ಜ.09 ರಂದು ಉದ್ಘಾಟನೆಗೊಂಡಿತು.


ದ.ಕ.ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಜಯರಾಮ ಕೆ.ಇ ಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಪಿಡಿಒ ಪ್ರವೀಣ್ ,ಗ್ರಾಮ ಪಂಚಾಯತ್ ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು,ಅನಿಲ್ ರೈ ಪುಡ್ಕಜೆ,ಒಕ್ಕೂಟದ ಅಧ್ಯಕ್ಷೆ ನಳಿನಾಕ್ಷಿ,ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ವೇತಾ,ಕಟ್ಟಡದ ಮಾಲಕ ಪರಮೇಶ್ವರ ಭಟ್ ,ರೈತ ಬಂಧು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಯಶೋಧ , ಕೃಷಿಯೇತರ ತಾಲೂಕು ವ್ಯವಸ್ಥಾಪಕರಾದ ಶ್ರೀಮತಿ ಮೇರಿ ಉಪಸ್ಥಿತರಿದ್ದರು.


ಒಕ್ಕೂಟದ ಸದಸ್ಯೆಯರು ಪ್ರಾರ್ಥಿಸಿ, ಬೆಳ್ಳಾರೆ ಎಂ.ಬಿ.ಕೆ ಗೀತಾ ಪ್ರೇಮ್ ಸ್ವಾಗತಿಸಿ,ನಿಶ್ಮಿತಾ ಹಾಗೂ ಶ್ರೀಮತಿ ದಿವ್ಯರವರು ಕಾರ್ಯಕ್ರಮ ನಿರೂಪಿಸಿ,ಪ್ರತಿಮಾ ವಂದಿಸಿದರು.