ಡಾ.ಕೆ.ವಿ.ಚಿದಾನಂದ, ಡಾ.ಜ್ಯೋತಿ ರೇಣುಕಾಪ್ರಸಾದ್ ಮತ್ತಿತರರ ಮೇಲೆ ಸೆಕ್ಷನ್ 107 ಕೇಸು

0

ಡಾ.ಕೆ.ವಿ.ಚಿದಾನಂದ, ಅಕ್ಷಯ ಕೆ.ಸಿ., ಶೋಭಾ ಚಿದಾನಂದ, ಡಾ.ಜ್ಯೋತಿ ರೇಣುಕಾಪ್ರಸಾದ್,, ಡಾ.ಉಜ್ವಲ್ ಯು.ಜೆ.ಯವರ ಮೇಲೆ ಸೆಕ್ಷನ್ 107 ರ ಪ್ರಕಾರ ಕೇಸು ದಾಖಲಿಸಿರುವ ಸುಳ್ಯ ತಹಶೀಲ್ದಾರ್ ಹಾಗೂ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನ್ಯಾಯಾಲಯವು ಜ. 1೦ರಂದು ಅಪರಾಹ್ನ ಸ್ವತಃ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.


ಸುಳ್ಯ ಪೊಲೀಸ್ ಉಪನಿರೀಕ್ಷಕರ ವರದಿಯ ಮೇರೆಗೆ ತಹಶೀಲ್ದಾರರು ಈ ಕೇಸು ದಾಖಲಿಸಿದ್ದು, “ಪ್ರಸ್ತುತ ಪ್ರಕರಣದಲ್ಲಿ ಆರೋಪಿತರಾದ ನೀವು ಸುಳ್ಯ ತಾಲೂಕಿನ ಯಾವುದೇ ಗ್ರಾಮದಲ್ಲಿ ಜಗಳ, ಹೊಡೆದಾಟ, ಆಸ್ತಿಪಾಸ್ತಿ ನಷ್ಟ, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಶಾಂತಿ ಕಾಪಾಡಿಕೊಳ್ಳಲು ಹಾಗೂ ಇಂದಿನಿಂದ ಒಂದು ವರ್ಷದ ಅವಧಿವರೆಗೆ ತಲಾ ಒಂದು ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಮುಚ್ಚಳಿಕೆಯನ್ನು ನಿಮ್ಮಿಂದ ಏಕೆ ಪಡೆಯಬಾರದು ಎಂಬುದಾಗಿ ಕಾರಣ ತೋರಿಸಬೇಕೆಂದು 19-12-2023 ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಪ್ರಕರಣದಲ್ಲಿ ಸ್ವತಃ ನೀವು ದಿನಾಂಕ 1೦-1-2024 ರಂದು ಅಪರಾಹ್ನ 3.3೦ ಗಂಟೆಗೆ ನಿಮ್ಮ ಆಧಾರ್ ಕಾರ್ಡ್ ಮತ್ತು ಜಮೀನಿನ ಆರ್‌ಟಿಸಿ ಪ್ರತಿಯೊಂದಿಗೆ ಖುದ್ದು ಹಾಜರಾಗಿ ಈ ನೋಟೀಸಿಗೆ ಸೂಕ್ತ ವಿವರಣೆಯನ್ನು ಕೊಡತಕ್ಕದ್ದು ಎಂದು ಜಿ.ಮಂಜುನಾಥ್ ತಹಶೀಲ್ದಾರ್ ಹಾಗೂ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಆದ ನಾನು ಆದೇಶಿಸಿದ್ದೇನೆ” ಎಂದು ತಿಳಿಸಿದ್ದಾರೆ.