ಸೋಣಂಗೇರಿ ಬಳಿ ಎರಡು ಕಾರುಗಳ ಮಧ್ಯೆ ಅಪಘಾತ, ವಾಹನಗಳು ಜಖಂ, ಸವಾರರು ಪಾರು

0

ಸುಳ್ಯದ ಸೋಣಂಗೇರಿ ಜಂಕ್ಷನ್ ಬಳಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಕಾರುಗಳು ಜಖಂ ಗೊಂಡು ಸವಾರರು ಯಾವುದೇ ಅಪಾಯವಿಲ್ಲದೆ ಪಾರಾಗಿರುವ ಘಟನೆ ಜನವರಿ 10 ರಂದು ಸಂಜೆ ನಡೆದಿದೆ.

ಸುಳ್ಯದಿಂದ ಪಂಜ ಕಡೆಗೆ ಸಂಚರಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮತ್ತು ಎಲಿಮಲೆಯಿಂದ ಸುಳ್ಯಕಡೆಗೆ ಬರುತ್ತಿದ್ದ ಮಾರುತಿ ಆಲ್ಟೋ ಕಾರು ನಡುವೆ ಅಪಘಾತ ಸಂಭವಿಸಿದೆ.

ಘಟನೆಯಿಂದ ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ಗಾಯಗಳು ಸಂಭವಿಸದೆ ಅಪಾಯದಿಂದ ಪಾರಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಎರಡು ಕಾರುಗಳೂ ಜಖಂಗೊಂಡಿದ್ದು
ಶಿಫ್ಟ್ ಕಾರುಗಳು ಸಂಪೂರ್ಣ ನಜ್ಜು ಗುಜ್ಜಾಗಿದೆ ಎಂದು ತಿಳಿದುಬಂದಿದೆ.