ಜ.20 ರಂದು ಸುಳ್ಯ ಕೊಡಿಯಾಲಬೈಲ್ ನಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ

0

11 ಮಂದಿಗೆ ಎಂಜೆಎಫ್ ಫೆಲೋಶಿಫ್ : ರೇಣುಕಾ ಸದಾನಂದ ಜಾಕೆ

ಲಯನ್ಸ್ ಪ್ರಾಂತೀಯ ಸಮ್ಮೇಳನ ‘ದಿಶಾನಿ’ ಜ.20ರಂದು ಸಂಜೆ 4.30 ರಿಂದ ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷೆ ಶ್ರೀಮತಿ ರೇಣುಕಾ ಸದಾನಂದ ಜಾಕೆ ಸುದ್ದಿಗೋಷ್ಢಿಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರು ಶ್ರೀ ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ. ಬಾಲಕೃಷ್ಣ ಶೆಟ್ಟಿ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್‌.ಕೆ.ನಾಯರ್, ಲಯನ್ಸ್ ಮಾಜಿ ಗವರ್ನರ್ ಅರುಣ್ ಶೆಟ್ಟಿ ಭಾಗವಹಿಸಲಿದ್ದಾರೆ.
ಲಯನ್ಸ್ ಡಿಸಾಸ್ಟರ್ ಫಂಡ್‌ಗೆ ಒಂದು ಸಾವಿರ ಡಾಲರ್ ದೇಣಿಗೆ ನೀಡಿದ ಡಾ.ಆರ್.ಕೆ.ನಾಯರ್ ಅವರಿಗೆ ಎಂಜೆಎಫ್ ಫೆಲೋಶಿಫ್ ನೀಡಿ ಗೌರವಿಸಲಾಗುವುದು. ಪ್ರಾಂತ್ಯ 7 ರಲ್ಲಿ ಒಟ್ಟು 11‌ ಮಂದಿ ತಲಾ ಒಂದು ಸಾವಿರ ಡಾಲರ್‌ನಂತೆ ಡಿಸಾಸ್ಟರ್ ಫಂಡ್‌ಗೆ ಕೊಡುಗೆ ನೀಡಿದ್ದಾರೆ ಎಂದು ಅವರು ವಿವರಿಸಿದರು. ಸಮ್ಮೇಳನದಲ್ಲಿ ಪ್ರಾಂತ್ಯದ ವ್ಯಾಪ್ತಿಯ 7 ಲಯನ್ಸ್ ಕ್ಲಬ್‌ಗಳ ಸದಸ್ಯರು ಕುಟುಂಬ ಸಮೇತ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಾಂತೀಯ ರಾಯಭಾರಿ ಪ್ರೊ.ಎಂ.ಬಾಲಚಂದ್ರ ಗೌಡ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಪ್ರಾಂತೀಯ ಸಮ್ಮೇಳನ ಸಮಿತಿ ಅಧ್ಯಕ್ಷೆ ಅನಿತಾ ಲಸ್ರಾದೋ, ಕಾರ್ಯದರ್ಶಿ ಡಾ.ಲಕ್ಷ್ಮೀಶ ಕೆ.ಎಸ್, ಖಜಾಂಜಿ ದೀಪಕ್ ಕುತ್ತಮೊಟ್ಟೆ, ವಿನೋದ್‌‌ ಲಸ್ರಾದೋ, ಜಾಕೆ ಸದಾನಂದ, ಕಮಲಾ‌ ಬಾಲಚಂದ್ರ ಉಪಸ್ಥಿತರಿದ್ದರು.