ಅರಂಬೂರಿನಲ್ಲಿ ಶಾಸಕಿ‌ ಭಾಗೀರಥಿ ಮುರುಳ್ಯ ರಿಂದ ಜನಸಂಪರ್ಕ‌ಸಭೆ

0

ಆಲೆಟ್ಟಿ ಗ್ರಾಮದ ಅರಂಬೂರಿನಲ್ಲಿ ಶಾಸಕಿ‌ ಕು.ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿ ಸಾರ್ವಜನಿಕ ಜನಸಂಪರ್ಕ ಸಭೆಯನ್ನು ನಡೆಸಲಾಯಿತು. ಮೂಕಾಂಬಿಕ ಭಜನಾ ಮಂದಿರ ಸಭಾಭವನದಲ್ಲಿ ನಡೆದ ಸಭೆಯಲ್ಲಿ ವಾರ್ಡಿನ ಅಭಿವೃದ್ಧಿ ವಿಷಯದ ಕುರಿತು ಸಮಾಲೋಚನೆ ಚರ್ಚಿಸಲಾಯಿತು.


ಶಾಲಾ ಅಭಿವೃದ್ಧಿ ಕಾರ್ಯ ಹಾಗೂ ಅಂಬಿಕಾ ಮಹಿಳಾ ಮಂಡಲಕ್ಕೆ ಸ್ವಂತ ಜಾಗ ಒದಗಿಸಿಕೊಡುವ ಬಗ್ಗೆ ಚರ್ಚಿಸಲಾಯಿತು. ಶಾಲೆಯ ನೂತನ ಕಟ್ಟಡ ನಿರ್ಮಾಣದ ಕಾಮಗಾರಿ ವೀಕ್ಷಿಸಿದರು. ಸಾರ್ವಜನಿಕರಿಂದ ಅಹವಾಲು ಅರ್ಜಿಗಳನ್ನು ಸ್ವೀಕರಿಸಲಾಯಿತು. ಸೇತುವೆ ಕಾಮಗಾರಿ ಪೂರ್ತಿಗೊಳಿಸುವ ಕುರಿತು ಭರವಸೆ ನೀಡಿದರು. ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷೆ ವೀಣಾ ವಸಂತ ಆಲೆಟ್ಟಿ, ಪಂಚಾಯತ್ ಮಾಜಿ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು, ಸದಸ್ಯರಾದ ಸುದೇಶ್ ಅರಂಬೂರು, ವೇದಾವತಿ ನೆಡ್ಚಿಲು, ಅನಿತಾ ಇಡ್ಯಡ್ಕ,ಆಲೆಟ್ಟಿ ಸೊಸೈಟಿ ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಉಪಸ್ಥಿತರಿದ್ದರು.


ಮೂಕಾಂಬಿಕಾ ಭಜನಾ ಮಂದಿರ ಅಧ್ಯಕ್ಷ ರತ್ನಾಕರ ರೈ ಅರಂಬೂರು, ಧರ್ಮಸ್ಥಳ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ನೆಡ್ಚಿಲು,ಮಹಿಳಾಮಂಡಲದ ಅಧ್ಯಕ್ಷರು, ಸದಸ್ಯರು, ಶಾಲಾಎಸ್.ಡಿ. ಎಂ.ಸಿ ಅಧ್ಯಕ್ಷ ರಮೇಶ್,ಶಿಕ್ಷಕ ಧನಂಜಯ, ಅಂಗನವಾಡಿ ಕಾರ್ಯಕರ್ತೆ ಗೀತಾ, ಸರಸ್ವತಿ,ಶಿವಪ್ರಕಾಶ್, ಜಗದೀಶ್ ಸರಳಿಕುಂಜ, ಕೃಷ್ಣಪ್ಪ ಕೆ ಎಸ್,ಕುಂಞರಾಮನ್ ಶ್ರೀ ಶೈಲಂ, ಅನಿಲ್ ಪರಿವಾರಕಾನ, ಜನಾರ್ದನ ಸಿರಿ ಕುರಲ್, ಬಾಲಚಂದ್ರ ಕಲ್ಚರ್ಪೆ, ವೆಂಕಟೇಶ್ ಕಲ್ಚರ್ಪೆ, ಕರುಣಾಕರ ಪಾಲಡ್ಕ, ದೀಕ್ಷಿತ್ ಪಾಲಡ್ಕ, ಶೇಷಪ್ಪ ನಾಯ್ಕ ಪರಿವಾರಕಾನ, ಕುಮಾರಸ್ವಾಮಿ ತೆಕ್ಕುಂಜ, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.