ಬೆಳ್ಳಾರೆ ಜ್ಞಾನದೀಪದಲ್ಲಿ ರಾಷ್ಟೀಯ ಯುವ ದಿನಾಚರಣೆ

0

ಜೇಸಿಐ ಬೆಳ್ಳಾರೆ ವತಿಯಿಂದ ರಾಷ್ಟೀಯ ಯುವ ದಿನಾಚರಣೆಯ ಅಂಗವಾಗಿ ಯುವ ಜಾಗೃತಿ ಕಾರ್ಯಕ್ರಮ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆಯಿತು.

ಹಿರಿಯ ಉಪನ್ಯಾಸಕ ಅಚ್ಚುತ ಅಟ್ಲೂರು ಯುವ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರದ ಪಿ. ಪಿ ಎಂ ಕೋಆರ್ಡಿನೆಟರ್ ಮನೋಜ್ ಕೋಡಿಕಲ್ ಜಾಗೃತಿ ಗೀತೆಗಳೊಂದಿಗೆ ದುಶ್ಚಟ ಮುಕ್ತ ಸಮಾಜ ನಿರ್ಮಾಣ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ಬೆಳ್ಳಾರೆ ಜೇಸಿಐ ಅಧ್ಯಕ್ಷ ಜಗದೀಶ್ ರೈ ಪೆರುವಾಜೆ ಅಧ್ಯಕ್ಷತೆ ವಹಿಸಿದ್ದರು. ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ವಂದಿಸಿದರು. ಪೂರ್ವಾಧ್ಯಕ್ಷೆ ನಿರ್ಮಲ ಜಯರಾಮ್, ಪ್ರದೀಪ್ ಕುಮಾರ್ ರೈ ಬೀಡು, ಯಾಹಿಯ ಬೆಳ್ಳಾರೆ ಸಹಕರಿದರು.