ಪೈಚಾರು ಬದ್ರಿಯಾ ಜುಮಾ ಮಸ್ಜಿದ್ ಮೇಲಂತಸ್ತು ಕಟ್ಟಡ ಉದ್ಘಾಟನೆ

0

ಧಾರ್ಮಿಕ ಪ್ರವಚನ ಕಾರ್ಯಕ್ರಮದ ಪ್ರಚಾರ ಪತ್ರಿಕೆ ಬಿಡುಗಡೆ

ಪೈಚಾರು ಬದ್ರಿಯಾ ಜುಮಾ ಮಸ್ಜಿದ್ ಇದರ ಮೇಲಂತಸ್ತು ಉದ್ಘಾಟನೆ ಹಾಗೂ ಎರಡು ದಿನಗಳ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮದ ಪ್ರಚಾರ ಪತ್ರವನ್ನು ಸ್ಥಳೀಯ ಖತೀಬರಾದ ಸಮೀರ್ ಅಹಮದ್ ನಈಮಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜಮಾತ್ ಕಮಿಟಿ ಅಧ್ಯಕ್ಷ ಶರೀಫ್ ಟಿ ಎ, ಸಮಿತಿಯ ಪದಾಧಿಕಾರಿಗಳು ಸದಸ್ಯರು ಜಮಾಅತರು ಉಪಸ್ಥಿತರಿದ್ದರು.


ಜನವರಿ 22ರಂದು ಮಸೀದಿಯ ಮೇಲಂತಸ್ತು ಉದ್ಘಾಟನಾ ಕಾರ್ಯಕ್ರಮವನ್ನು ಖ್ಯಾತ ವಿದ್ವಾಂಸ ಪಂಡಿತರಾದ ಕರ್ನಾಟಕ ರಾಜ್ಯ ಜಮಿಯ್ಯತುಲ್ ಉಲಮಾ ಅಧ್ಯಕ್ಷ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯರ್ ರವರು ನೆರವೇರಿಸಲಿದ್ದಾರೆ. ಆ ದಿನದ ಪ್ರಭಾಷಣವನ್ನು ಖ್ಯಾತ ವಾಗ್ಮಿ ಅಬ್ದುಲ್ ಗಪೂರ್ ಮೌಲವಿ ಕಿಚೇರಿ ಮಾಡಲಿದ್ದು, ಸಮಾರೋಪ ಸಮಾರಂಭವಾದ ಜನವರಿ 23ರಂದು ಖ್ಯಾತ ಪಂಡಿತರಾದ ಪೇರೋಡ್ ಅಬ್ದುಲ್ ರಹಿಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಸಾಮೂಹಿಕ ದುವಾ ಪ್ರಾರ್ಥನಾ ಕಾರ್ಯಕ್ರಮವನ್ನು ಸೈಯದ್ ಜೈನುಲ್ ಆಬಿದಿನ್ ತಂಗಳ್ ಅಲ್ – ಬುಖಾರಿ ಎಣ್ಮೂರು ನೆರವೇರಿಸಲಿದ್ದಾರೆ.
ಹಾಗೂ ಎರಡು ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಉಲಮಾ ಪಂಡಿತರುಗಳು, ಸಾಮಾಜಿಕ ಧಾರ್ಮಿಕ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.