ಮಂಡೆಕೋಲಿನಲ್ಲಿ‌ ಕೂಸಿನ‌ ಮನೆ ಉದ್ಘಾಟನೆ

0

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಡೆಕೋಲು‌ ಗ್ರಾಮ ಪಂಚಾಯತ್ ನಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡ ಕೂಸಿನ ಮನೆ (ಶಿಶುಪಾಲನಾ ಕೇಂದ್ರ) ಜ.12ರಂದು‌ ಉದ್ಘಾಟನೆಗೊಂಡಿತು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಕೂಸಿನ‌ ಮನೆಯನ್ನು ಉದ್ಘಾಟಿಸಿದರು.


ಈ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಕುಶಲ ಯು, ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಪಂಚಾಯತ್ ಅಭಿವೃಧ್ಧಿ ಅಧಿಕಾರಿ ರಮೇಶ್ ಪಿ., ಸದಸ್ಯರಾದ ಶ್ರೀಮತಿ ವಿನುತಾ ಪಾತಿಕಲ್ಲು, ಶ್ರೀಮತಿ ದಿವ್ಯಲತಾ ಚೌಟಾಜೆ, ಶ್ರೀಮತಿ ತಿಲಕ ಕುತ್ಯಾಡಿ, ಶ್ರೀಮತಿ ಗೀತಾ, ತಾಂತ್ರಿಕ ಅಭಿಯಂತರರಾದ ಸುಧನ್ವ ಕೃಷ್ಣ, ಕ್ಯಾರ್ ಟ್ತಾಕರ್ಸ್ ಗಳು, ಎಲ್ ಸಿ ಆರ್ ಪಿ, ಎಂ.ಬಿ.ಕೆ. ಗಳು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.