ಮಂಡೆಕೋಲು : ಕೃಷಿ ಪಂಪ್ ಬಳಕೆಯ ವಿದ್ಯುತ್ ಕಳವು ಆರೋಪ : ಮೆಸ್ಕಾಂ ಜಾಗೃತ ದಳ ಅಧಿಕಾರಿಗಳ ಧಾಳಿ

0

ಕೃಷಿ ಕಾರ್ಯಗಳಿಗಾಗಿ ಸರಕಾರ ನೀಡುವ ಉಚಿತ ವಿದ್ಯುತ್ ನ್ನು ಗ್ರಾಹಕರೊಬ್ಬರು ಮನೆಗೆ ಮತ್ತು ಕೈಗಾರಿಕೆಗೆ ಬಳಕೆ ಮಾಡಿರುವ ಆರೋಪದಲ್ಲಿ ಮಂಗಳೂರಿನ ಮೆಸ್ಕಾಂ ಜಾಗೃತದಳ ಅಧಿಕಾರಿಗಳು ಧಾಳಿ ನಡೆಸಿದ ಘಟನೆ ವರದಿಯಾಗಿದೆ.

ಮಂಡೆಕೋಲಿನ ಕೆ.ಬಿ.ಇಬ್ರಾಹಿಂ ಎಂಬವರಿಗೆ ಕೃಷಿ ಕಾರ್ಯಕ್ಕೆ ಉಚಿತ ವಿದ್ಯುತ್ ಸೌಲಭ್ಯವಿದೆ. ಈ ಕೃಷಿ ಪಂಪ್ ನಿಂದ ವಿದ್ಯುತ್ತನ್ನು ಇಬ್ರಾಹಿಂ ರವರು ತಮ್ಮ ಮನೆ ಸೌಲಭ್ಯಕ್ಕೆ ಹಾಗೂ ಫರ್ನಿಚರ್ ತಯಾರಿಕಾ ಘಟಕಕ್ಕೆ ಬಳಸುತಿದ್ದರೆನ್ನಲಾಗಿದೆ. ಈ ಮಾಹಿತಿ ಪಡೆದ ಮೆಸ್ಕಾಂ ಜಾಗೃತದಳದ ಎ.ಇ.ಇ. ಪ್ರವೀಣ್ ಕುಮಾರ್ ನೇತೃತ್ವದ ತಂಡ ಇಂದು ಮಂಡೆಕೋಲಿನ ಇಬ್ರಾಹಿಂರ ಮನೆಗೆ ಧಾಳಿ ನಡೆಸಿದೆ.

“ಕೃಷಿ ಪಂಪ್ ಸೆಟ್ ನಿಂದ ಮನೆಗೆ ಹಾಗೂ ಮನೆಯ ಪಕ್ಕದ ಫರ್ನಿಚರ್ ತಯಾರಿಕಾ ಘಟಕಕ್ಕೆ ವಿದ್ಯುತ್ ಬಳಕೆ ಮಾಡಿರುವುದು ಕಂಡು ಬಂದಿದೆ. ಅಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದು, ಇಬ್ರಾಹಿಂರ ಮೇಲೆ ಕೇಸು ದಾಖಲಿಸಿದ್ದೇವೆ” ಎಂದು ಎ.ಇ.ಇ. ಪ್ರವೀಣ್ ಕುಮಾರ್ ಸುದ್ದಿಗೆ ತಿಳಿಸಿದ್ದಾರೆ.