ತೊಡಿಕಾನ : ಧನುಪೂಜೆ ಸಮಾಪ್ತಿ ಹಾಗೂ ಮಕರ ಸಂಕ್ರಾಂತಿ ಪ್ರಯುಕ್ತ ಆಯಿರ ಕೊಡ ಅಭಿಷೇಕ

0

ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ಧನುಮಾಸದ ಪ್ರಯುಕ್ತ ಕಳೆದೊಂದು ತಿಂಗಳಿನಿಂದ ಜರುಗುತ್ತಿದ್ದ ಧನುಪೂಜೆಯು ಇಂದು ಸಮಾಪ್ತಿಗೊಂಡಿತು.

ಹಾಗೂ ಮಕರ ಸಂಕ್ರಮಣದ ಪ್ರಯುಕ್ತ ಭಕ್ತಾಧಿಗಳ ಭಜನಾ ಸೇವೆಯ ಮೂಲಕ ಬೆಳಿಗ್ಗೆ ಶ್ರೀ ದೇವರ ಗುಡಿಯಿಂದ ತೀರ್ಥ ತಂದು ಗಣಪತಿ ಹೋಮ ನಡೆಯಿತು.

ಬಳಿಕ ಆಯಿರ ಕೊಡ ಅಭಿಷೇಕ , ಶತರುದ್ರಾಭಿಷೇಕ ಮತ್ತು ಸಿಯಾಳಭಿಷೇಕ, ಶ್ರೀ ಕಾಂಚಿ ಕಾಮಕೋಟಿ ವೇದ ವಿದ್ಯಾಲಯ ಅರಂಬೂರಿನ ಶ್ರೀ ಭಾರದ್ವಾಜಾಶ್ರಮದವರಿಂದ ವೇದ ಪಾರಾಯಣ, ಮಧ್ಯಾಹ್ನ ಮಹಾಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ.ದಿವಾಕರ ರೈ, ನಿಕಟ ಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ವಿಶ್ವ ಹಿಂದೂ ಪರಿಷತ್ ಇದರ ತಾಲೂಕು ಅಧ್ಯಕ್ಷ ಸೋಮಶೇಖರ ಪೈಕ, ವ್ಯವಸ್ಥಾಪನಾ ಸಮಿತಿ ಸದಸ್ಯ ಎಸ್.ಪಿ.ಲೋಕನಾಥ್, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರು ಸೇರಿದಂತೆ, ಊರವರು, ಪರವೂರ ಭಕ್ತಾಧಿಗಳು ಹಾಜರಿದ್ದರು. ರಾತ್ರಿ ರಂಗಪೂಜೆ ಜರುಗಲಿದೆ.