ಸತತ ಎರಡನೇ ಬಾರಿ ವಿಂಟರ್ ಕಪ್ ಮುಡಿಗೇರಿಸಿಕೊಂಡ ಸ್ಟಾರ್ ಬಾಯ್ಸ್ ದಬ್ಬಡ್ಕ ತಂಡ

0

ಚೆಂಬು: ಸರಕಾರಿ ಪ್ರೌಢಶಾಲೆ ಚೆಂಬು ಮೈದಾನದಲ್ಲಿ ನಡೆದಂತಹ 2024 ವಿಂಟರ್ ಕಪ್ ಪ್ರಶಸ್ತಿಯನ್ನು ಸತತವಾಗಿ ಎರಡು ವರ್ಷ ಸ್ಟಾರ್ ಬಾಯ್ಸ್ ದಬ್ಬಡ್ಕ ತಂಡವು ಪಡೆಯಿತು.ದ್ವಿತೀಯ ಸ್ಥಾನವನ್ನು ಕಲೇರಿ ಫ್ರೆಂಡ್ಸ್ ಕುದ್ರೆಪಾಯ ತಂಡವು ಪಡೆಯಿತು. ಸಮಾರಂಭವನ್ನು ತೀರ್ಥರಾಮ ಪೂಜಾರಿ ಗದ್ದೆ ಉದ್ಘಾಟಿಸಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ಶುಭ ಕೋರಿದರು. ಸಮಾರಂಭದಲ್ಲಿ ಗಣ್ಯ ಅತಿಥಿಗಳು ಹಾಗೂ ಮಿತ್ರಕೂಟ ಕ್ರೀಡಾ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಕ್ರೀಡಾ ಅಭಿಮಾನಿಗಳು ಭಾಗವಹಿಸಿದರು.