ಜೇಸಿಐ ಪಂಜ ಪಂಚಶ್ರೀಪದಗ್ರಹಣ ಸಮಾರಂಭ

0

ಜೇಸಿಐ ಪಂಜ ಪಂಚಶ್ರೀ ಇದರ 27ನೇ ವರುಷದ ಅಧ್ಯಕ್ಷರಾಗಿ ಆಯ್ಕೆಯಾದ ಜೀವನ್ ಮಲ್ಕಜೆ ಮತ್ತು ಘಟಕಾಡಳಿತ ಮಂಡಳಿಗೆ ಪದಗ್ರಹಣ ಸಮಾರಂಭ ಜ.14.ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ಜರುಗಿತು.

ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ ವಹಿಸಿದ್ದರು. ಪದಗ್ರಹಣ ಸ್ವೀಕರಿಸಿದ ಬಳಿಕ ನೂತನ ಅಧ್ಯಕ್ಷ ಜೀವನ್ ಮಲ್ಕಜೆ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿ ಜೇಸಿಐ ರಾಷ್ಟ್ರೀಯ ತರಬೇತುದಾರ ಬಿ.ವಿ.ಸೂರ್ಯನಾರಾಯಣ ಮಾತನಾಡಿ “ಜೇಸಿ ಎಂಬುದು ಒಳ್ಳೆಯ ಹೆಮ್ಮರವಿದಂತೆ.ಜೇಸಿಯಿಂದ ಪಡೆದು ಸಮಾಜಕ್ಕೆ ಕೊಡುವ. ಜೇಸಿ ಜೀವನಕ್ಕೆ ಒಳ್ಳೆಯ ದಾರಿ ತೋರಿಸುತ್ತದೆ.ನಮ್ಮ ಜೀವನ ಹಸನಾಗುತ್ತದೆ.”ಎಂದು ಹೇಳಿದರು.

ಮುಖ್ಯ ಅತಿಥಿ ತುಂಬೆ ಬಿ.ಎ. ಐ.ಟಿ.ಐ ಪ್ರಾಂಶುಪಾಲ ನವೀನ್ ಕೆ.ಎಸ್. ಮಾತನಾಡಿ”ಜೇಸಿ ಎಂಬುದು ಅಂತಾರಾಷ್ಟ್ರೀಯ ಸಂಸ್ಥೆ. ನಲ್ವತ್ತು ವರ್ಷಗಳ ಒಳಗಿನ ಯುವಕ-ಯುವತಿಯರನ್ನು ಸಮಾಜದ ಒಳಿತಿಗಾಗಿ ಅರ್ಪಿಸುವ ಸಂಸ್ಥೆ. ಜೇಸಿಗೆ ಸೇರಿದಾಗ ನಾವು ವೈಯಕ್ತಿಕ ಮತ್ತು ಸಂಘಟಿತವಾಗಿ ಬೆಳೆಯುತ್ತೇವೆ”.ಎಂದು ಹೇಳಿದರು.

ಪದಗ್ರಹಣಾಧಿಕಾರಿ ವಲಯ 15 ಪ್ರಾಂತ್ಯ ‘ಎ’ ವಲಯ ಉಪಾಧ್ಯಕ್ಷ ಅಭಿಷೇಕ್ ಜಿ.ಯಂ.ಮಾತನಾಡಿ “ಜೇಸಿಐ ಪಂಜ ಪಂಚಶ್ರೀ ಉತ್ತಮ ಅಷ್ಟು ಅಚ್ಚುಕಟ್ಟಾಗಿ ಶಿಸ್ತಿನಿಂದ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ .ಇವರು ಪ್ರಶಸ್ತಿ ಮನ್ನಣೆಗಾಗಿ ಕಾರ್ಯಕ್ರಮ ಮಾಡುವುದಿಲ್ಲ. ಪ್ರತಿ ವರುಷ ನಡೆಯುವ ಹುಚ್ಚು ನಾಯಿ ನಿರೋಧಕ ಲಸಿಕೆ , ಈಜು ತರಬೇತಿ ಹೀಗೆ ವಿನೂತನ ಅನೇಕ ಕಾರ್ಯಕ್ರಮಗಳು
ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.” ಎಂದು ಹೇಳಿದರು

ಘಟಕದ ನಿಕಟಪೂರ್ವಾಧ್ಯಕ್ಷ ಶಿವಪ್ರಸಾದ್ ಹಾಲೆಮಜಲು, ಕಾರ್ಯದರ್ಶಿ ವಾಚಣ್ಣ ಕೆರೆಮೂಲೆ, ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ನೂತನ ಕಾರ್ಯದರ್ಶಿ ಜೀವನ್ ಶೆಟ್ಟಿಗೆದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ನೂತನ ಕಾರ್ಯಕ್ರಮಗಳ ಬ್ಯಾನರ್ ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮದಲ್ಲಿ ಪ್ರಕಾಶ್ ಅಳ್ಪೆ ವೇದಿಕೆಗೆ ಆಹ್ವಾನಿಸಿದರು. ಕಿರಣ್ ನೆಕ್ಕಿಲ ಜೇಸಿ ವಾಣಿ ನುಡಿದರು. ಲೋಕೇಶ್ ಆಕ್ರಿಕಟ್ಟೆ ಸ್ವಾಗತಿಸಿದರು. ಅತಿಥಿಗಳ, ಪದಾಧಿಕಾರಿಗಳ, ಪರಿಚಯವನ್ನು ಕೌಶಿಕ್ ಕುಳ, ದುರ್ಗಾದಾಸ್ ಕಡ್ಲಾರ್,ಅಶ್ವತ್ ಬಾಬ್ಲುಬೆಟ್ಟು,ವಿಜೇಶ್ ಹಿರಿಯಡ್ಕ, ಪ್ರವೀಣ್ ಕಾಯರ, ಚರಣ್ ದೇರಪ್ಪಜ್ಜನ ಮನೆ ಮಾಡಿದರು. ಜೀವನ್ ಶೆಟ್ಟಿಗೆದ್ದೆ ವಂದಿಸಿದರು.