ಇಂದು ಮತ್ತು ನಾಳೆ ಶ್ರೀ ಶಿರಾಡಿ ದೈವಸ್ಥಾನ ಹಲ್ಲುಜಿಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವಗಳ ನೇಮೋತ್ಸವ

0

ಶ್ರೀ ಶಿರಾಡಿ ದೈವಸ್ಥಾನ ಹಲ್ಲುಜಿ ಕಲ್ಲಾಜೆ ಇಲ್ಲಿ (ಇಂದು) ಜ.15 ಮತ್ತು ಜ.16 ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಶಿರಾಡಿ ದೈವ ಮತ್ತು ಅಗ್ನಿಗುಳಿಗ ನೇಮೋತ್ಸವ ನಡೆಯಲಿದೆ.

ಇಂದು ಬೆಳಿಗ್ಗೆ ಗಣಹೋಮ, ದೈವಗಳಿಗೆ ತಂಬಿಲ ನಡೆದು ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಂಜೆ ಗಂಟೆ 7.00 ರಿಂದ ಗೋಪಾಲಕೃಷ್ಣ ಯಕ್ಷಗಾನ ಮಂಡಳಿ ಎಡಮಂಗಲ ವತಿಯಿಂದ ‘ಸರ್ಪ ಸಿರಿ ಮುಡಿ’ ಯಕ್ಷಗಾನ ಬಯಲಾಟ ನಡೆಯಲಿದೆ. ಜ.16 ರ ಬೆಳಗ್ಗೆ ಗಂಟೆ 8-00ರಿಂದ ಶ್ರೀ ಶಿರಾಡಿ ದೈವದ ನೇಮೋತ್ಸವ ನಡೆದು ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಅಪರಾಹ್ನ ಅಗ್ನಿಗುಳಿಗ ನೇಮೋತ್ಸವ ನಡೆಯಲಿದೆ.