ಗುತ್ತಿಗಾರು: ಬೈಕ್ ಗೆ ಗುದ್ದಿದ ಕಾರು, ಸವಾರ ಗಾಯ

0

ಗುತ್ತಿಗಾರಿನ ಬಾಕಿಲ ಎಂಬಲ್ಲಿ ಕಾರೊಂದು ರಾಂಗ್ ಸೈಡ್ ನಲ್ಲಿ ಬಂದು ಬೈಕ್ ಗೆ ಗುದ್ದಿ ಬೈಕ್ ಸವಾರ ಗಾಯಗೊಂಡ ಘಟನೆ ಜ.15 ರಂದು ನಡೆದಿದೆ.

ಆಂದ್ರಪ್ರದೇಶದ ಕಾರು ಸುಬ್ರಹ್ಮಣ್ಯ ಕ್ಕೆ ಬಂದು ಸುಳ್ಯ ಕಡೆ ಬರುತಿದ್ದು ಬಾಕಿಲ ಬಳಿ ಬಂದಾಗ ವಾಹನವೊಂದನ್ನು ಓವರ್ ಟೇಕ್ ಮಾಡಿ ಮುಂದೆ ಬಂದು ಗುತ್ತಿಗಾರು ಕಡೆ ತೆರಳುತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬೈಕ್ ರಸ್ತೆಗೆ ಎಸೆಯಲ್ಪಟ್ಟು ಸವಾರರ ಕಾಲಿಗೆ ಗಂಭೀರ ಗಾಯವಾಗಿದೆ.

ಗಾಯಾಳುವನ್ನು ಅಮರ ಚಾರಿಟೇಬಲ್ ಟ್ರಸ್ಟ್ ನ ಅಂಬ್ಯೂಲೆನ್ಸ್ ನಲ್ಲಿ ತಂದು ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.